ಬೆಳಗಾವಿ: ನಗರದ ಹಿಂದವಾಡಿಯ ಮಹಾವೀರ ಉದ್ಯಾನದ ಬಳಿ 10 ವರ್ಷದ ಬಾಲಕಿಯನ್ನು ಅಪಹರಣ ಮಾಡಲು ಯತ್ನಿಸಿದ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ. ಇದರ ವಿಡಿಯೊ ತುಣುಕುಗಳು ಸಿಸಿಟಿವಿ ಕ್ಯಾಮರಾದಲ್ಲಿ ಹರಿದಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇಲ್ಲಿನ ಮಾರುತಿ ನಗರದ ಗಜಾನನ ಪಾಟೀಲ (40) ಬಂಧಿತ ಆರೋಪಿ. ಮಂಗಳವಾರ ಸಂಜೆ 6 ರ ಸುಮಾರಿಗೆ ಟ್ಯೂಷನ್ ಕ್ಲಾಸ್ ಮುಗಿಸಿಕೊಂಡು ಬಾಲಕಿ ಮನೆಗೆ ಹೊರಟಿದ್ದಳು. ಹತ್ತಿರದಿಂದ ಆಕೆಯನ್ನು ಹಿಂಬಾಲಿಸಿದ ಆರೋಪಿ ಮಹಾವೀರ ಉದ್ಯಾನದ ಬಳಿ, ಅಂಚೆ ಕಚೇರಿ ರಸ್ತೆಯಲ್ಲಿ ತಡೆದು ನಿಲ್ಲಿಸಿದ.

‘ನಿಮ್ಮ ತಾಯಿಯನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ, ನಿನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಬಾ’ ಎಂದು ಬಾಲಕಿಯನ್ನು ಪುಸಲಾಯಿಸಲು ಯತ್ನಿಸಿದ. ಬಾಲಕಿ ಅದಕ್ಕೆ ಒಪ್ಪದಿದ್ದಾಗ ಬಲವಂತವಾಗಿ ಎತ್ತಿಕೊಂಡು ಓಡತೊಡಗಿದ. ಇದರಿಂದ ಹೆದರಿದ ಬಾಲಕಿ ಕಿರುಚಾಡಲು ಶುರು ಮಾಡಿದಳು. ಚೀರಾಟದ ಧ್ವನಿ ಕೇಳಿ, ಉದ್ಯಾನದಲ್ಲಿದ್ದ ವಾಯುವಿಹಾರಗಳು ಓಡಿ ಬಂದರು. ಜನ ಸೇರುತ್ತಿರುವುದನ್ನು ಗಮನಿಸಿದ ಆರೋಪಿ ಗಜಾನನ ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ.

ಬಾಲಕಿಯನ್ನು ರಕ್ಷಿಸಿದ ವಾಯು ವಿಹಾರಿಗಳು ಆಕೆಯ ಪಾಲಕರಿಗೆ ಮಾಹಿತಿ ನೀಡಿದರು. ತಿಲಕವಾಡಿ ಪೊಲೀಸ್ ಠಾಣೆಗೆ ಬಂದ ಪಾಲಕರು ಬುಧವಾರ ಅಪಹರಣ ಯತ್ನದ ದೂರು ದಾಖಲಿಸಿದರು.

ತನಿಖಾಧಿಕಾರಿ, ಉದ್ಯಮಭಾಗ ಠಾಣೆ ಇನ್‌ಸ್ಪೆಕ್ಟರ್ ರಾಮಣ್ಣ ಬೀರಾದರ ನೇತೃತ್ವದ ತಂಡ ಪ್ರಕರಣ ಭೇದಿಸಿದೆ. ಖಡೇಬಜಾರ್‌ನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಖಡೇಬಜಾರ್ ಎಸಿಪಿ ಅರುಣ್‌ಕುಮಾರ ಕೋಳೂರ ಅರೋಪಿ ವಿಚಾರಣೆ ನಡೆಸಿದರು.

ಬಾಲಕಿ ಅಪಹರಣ ಯತ್ನದ ದೃಶ್ಯ ಸುತ್ತಮುತ್ತಲಿನ ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಹಾಡಹಗಲೇ ಬಾಲಕಿಯನ್ನು ಎತ್ತಿಕೊಂಡು ಓಡಲು ಯತ್ನಿಸಿದ ಘಟನೆ ನಗರದ ಪಾಲಕರು ಭಯಪಡುವಂತೆ ಮಾಡಿದೆ.

ಮಕ್ಕಳನ್ನು ತರಬೇತಿಗೊಳಿಸಿ: ಐಜಿಪಿ

‘ಅಪಹರಣಕಾರನ ಕೈಯಿಂದ ಬಿಡಿಸಿಕೊಳ್ಳಲು ಬಾಲಕಿ ಕಿರುಚಾಡಿದ್ದಾಳೆ. ಬಾಲಕಿಯ ತಂದೆ– ತಾಯಿ ಆ ರೀತಿ ಬಾಲಕಿಯನ್ನು ತರಬೇತಿಗೊಳಿಸಿದ್ದರು ಎಂದು ಗೊತ್ತಾಗಿದೆ. ಇದು ಅಭಿನಂದನಾರ್ಹ. ಬಾಲಕಿಯ ಧೈರ್ಯದ ಕಾರಣ ಅನಾಹುತ ತಪ್ಪಿದೆ. ಪಾಲಕರು ಇಂಥ ತಿಳಿವಳಿಕೆಯನ್ನು ಮಕ್ಕಳಿಗೆ ಕೊಡಬೇಕು’ ಎಂದು ಉತ್ತರ ವಲಯ ಐಜಿಪಿ ವಿಕಾಶ್‌ಕುಮಾರ್ ಹೇಳಿದರು.

‘ಉದ್ಯಾನದ ಸುತ್ತ ಸೇರಿದ ಜನ ಕೂಡ ಓಡಿ ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ಜನರು ಈ ರೀತಿ ಜಾಗ್ರತರಾಗಿರುವುದು ಅಭಿನಂದನಾರ್ಹ. ಇಂಥ ಘಟನೆ ಮರುಕಳಿಸದಂತೆ ಉತ್ತರ ವಲಯದ ಎಲ್ಲ ಪೊಲೀಸ್ ಠಾಣೆಗಳಿಗೂ ಸೂಚನೆ ನೀಡಿ, ಶಾಲೆಗಳ ಸುತ್ತ ವಿಶೇಷ ನಿಗಾ ಇಡಲು ಸೂಚಿಸಲಾಗುವುದು’ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.