ಹಾಸನ: ಹಣ ಹಾಕುವ ಯಂತ್ರ (ಸಿಡಿಎಂ)ದಲ್ಲಿ ಹಣ ಹಾಕಲು ಬಂದಿದ್ದ ವೇಳೆ ಬೇಜವಾಬ್ದಾರಿಯಿಂದಾಗಿ ವ್ಯಕ್ತಿಯು ₹39,500 ಕಳೆದುಕೊಂಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಮಂಗಳವಾರ ಹಣ ಜಮಾ ಮಾಡಲು ಆಕ್ಸಿಸ್ ಬ್ಯಾಂಕ್ನ ಲಾಬಿಗೆ ತೆರಳಿದ ಸೋಹನ್ ಲಾಲ್ ಎಂಬುವವರು, ₹40ಸಾವಿರ ಹಾಕಿದ್ದಾರೆ. ಈ ವೇಳೆ ತಾಂತ್ರಿಕ ಕಾರಣದಿಂದ ₹500ರ ನೋಟು ವಾಪಸ್ ಬಂದಿದೆ. ಉಳಿದ ₹39,500 ಜಮಾ ಆಗಿದೆ ಎಂದು ತಪ್ಪು ತಿಳಿದ ಸೋಹನ್ ಲಾಲ್, ಮರಳಿ ಬಂದಿದ್ದ ₹500 ನೋಟು ಬದಲಿಸಿಕೊಳ್ಳಲು ಬ್ಯಾಂಕಿನ ಒಳಗೆ ಹೋಗಿದ್ದಾರೆ.

ಇದೆ ವೇಳೆ ಹಣ ಪಡೆಯಲು ಎಟಿಎಂಗೆ ಬಂದ ಇಬ್ಬರು ಅಪರಿಚಿತರು, ಹಣ ಹಾಕುವ ಯಂತ್ರದಿಂದ ಹೊರಗೆ ಬಂದ ₹39,500 ಅನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.

ಅಪರಿಚಿತರು ಎಟಿಎಂನಿಂದ ಹಣ ಪಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.