ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ, ಸಂಸದ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಶಿಗ್ಗಾವಿ ಕ್ಷೇತ್ರ ಹಾಗೂ ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾದ ಸಂಡೂರು ಕ್ಷೇತ್ರಕ್ಕೆ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಮತದಾರರು ಅತೀವ ಉತ್ಸಾಹದಿಂದ ಪಾಲ್ಗೊಂಡು ಹಕ್ಕುಗಳನ್ನು ಚಲಾಯಿಸಿದರು.

ಶಿಗ್ಗಾವಿಯಲ್ಲಿ ಶೇ 80.48, ಸಂಡೂರಿನಲ್ಲಿ ಶೇ 76.24 ಹಾಗೂ ಚನ್ನಪಟ್ಟಣದಲ್ಲಿ ಶೇ 88.80ರಷ್ಟು ಮತದಾನವಾಗಿದೆ. ಉಪಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಯಿತು.

ಮೂರೂ ಕ್ಷೇತ್ರಗಳಲ್ಲಿ ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸಿರುವ ಕಾರಣ, ಇದು ಪ್ರತಿಷ್ಠೆಯ ಕಣವಾಗಿಯೂ ತುರುಸಿನಿಂದ ಕೂಡಿತ್ತು. ಚನ್ನಪಟ್ಟಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಜಿಗಿದು ಟಿಕೆಟ್ ಪಡೆದ ಸಿ.ಪಿ. ಯೋಗೇಶ್ವರ್ ಅವರ ವಿರುದ್ಧ ಚೊಚ್ಚಲ ಗೆಲುವಿಗೆ ಕಾದಿರುವ ಕುಮಾರಸ್ವಾಮಿ ಅವರ ಪುತ್ರ, ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಸ್ಪರ್ಧಿಸಿದ್ದಾರೆ.

ರಾಜಕೀಯಕ್ಕೆ ಪುತ್ರ ಭರತ್ ಬೊಮ್ಮಾಯಿ ಪ್ರವೇಶಕ್ಕೆ ರಂಗ ಸಜ್ಜು ಮಾಡಿರುವ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಪಕ್ಷವು ಯಾಸೀರ್ ಅಹ್ಮದ್ ಖಾನ್ ಪಠಾಣ ಎಂಬುವವರನ್ನು ಕಣಕ್ಕಿಳಿಸಿದೆ.

ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ವಿರುದ್ಧ ಬಂಗಾರು ಹನುಮಂತು ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮೂರು ಕ್ಷೇತ್ರದಲ್ಲಿ ಗೆಲುವಿಗಾಗಿ ಪಕ್ಷಗಳು ಕೊನೆ ಕ್ಷಣದ ಕಸರತ್ತುಗಳನ್ನು ನಡೆಸಿದವು. ಈ ಉಪಚುನಾವಣೆ ಮತದಾರರಲ್ಲೂ ತೀವ್ರ ಕುತೂಹಲ ಕೆರಳಿಸಿತ್ತು.

ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗುತ್ತಿದ್ದಂತೆ ಮತಗಟ್ಟೆಗಳತ್ತ ತಂಡೋಪತಂಡವಾಗಿ ಬಂದ ಮತದಾರರು, ಸಂಜೆಯವರೆಗೂ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿದರು.
.LIVE | ಉಪಚುನಾವಣೆ: ಚನ್ನಪಟ್ಟಣ– ಶೇ 88.80; ಶಿಗ್ಗಾವಿ– ಶೇ 80.48; ಸಂಡೂರು– ಶೇ 76.24 ಮತದಾನ .
ಚನ್ನಪಟ್ಟಣದಲ್ಲಿ ಶೇ 88.80ರಷ್ಟು ಮತದಾನ

ಚನ್ನಪಟ್ಟಣ ಕ್ಷೇತ್ರದಲ್ಲಿನ ಸ್ಥಾಪಿಸಲಾದ 276 ಮತಗಟ್ಟೆಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ತಾಲ್ಲೂಕಿನ ಹೊಂಗನೂರಿನ ಮತಗಟ್ಟೆ 4ರಲ್ಲಿ ವಿದ್ಯುನ್ಮಾನ ಮತಯಂತ್ರಕ್ಕೆ ಅಂಟಿಸಿರುವ ಅಭ್ಯರ್ಥಿಗಳ ಕ್ರಮಸಂಖ್ಯೆಯನ್ನು ಅದಲುಬದಲು ಮಾಡಿ ಇಟ್ಟಿರುವ ಕುರಿತು ಮೈತ್ರಿ ಅಭ್ಯರ್ಥಿ ನಿಖಿಲ್ ಅವರು ಆಕ್ಷೇಪ ವ್ಯಕ್ತಪಡಿಸಿ, ಚುನಾವಣಾಧಿಕಾರಿಗೆ ದೂರು ಸಲ್ಲಿಸಿದರು.

ಚನ್ನಪಟ್ಟಣ ಉಪಚುನಾಚಣೆಯ 276 ಮತಗಟ್ಟೆಗಳಲ್ಲಿಯು ಶಾಂತಿಯುತ ಮತದಾನ ನಡೆಯುತ್ತಿದೆ. ಸಂಜೆ 5 ಗಂಟೆಯ ಹೊತ್ತಿಗೆ ಶೇ 84.26ರಷ್ಟು ಮತದಾನವಾಗಿತ್ತು.

ಶಿಗ್ಗಾವಿ ಕ್ಷೇತ್ರದಲ್ಲಿ ಶೇ 80.48ರಷ್ಟು ಮತದಾನ

ಶಿಗ್ಗಾವಿ ಕ್ಷೇತ್ರದಲ್ಲಿ ಸಂಜೆ 6ಕ್ಕೆ ಮತದಾನ ಕೊನೆಗೊಂಡಿತು. ಆದರೆ ಸರತಿ ಸಾಲಿನಲ್ಲಿದ್ದವರಿಗೆ ಮತದಾನಕ್ಕೆ ಮತಗಟ್ಟೆ ಅಧಿಕಾರಿಗಳು ಹಕ್ಕು ಚಲಾವಣೆಗೆ ಅವಕಾಶ ನೀಡಿದರು. ಸಂಜೆ 7.30ರ ಹೊತ್ತಿಗೆ ಶೇ 80.48ರಷ್ಟು ಮತದಾನವಾಗಿದೆ.

‘ಕ್ಷೇತ್ರದಲ್ಲಿ 2,37,525 ಮತದಾರರಿದ್ದಾರೆ. ಸಂಜೆ 7.30 ಗಂಟೆವರೆಗಿನ ಮಾಹಿತಿ ಪ್ರಕಾರ, 1,91,166 ಮತದಾರರು ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದ ಒಟ್ಟು 241 ಮತಗಟ್ಟೆಯಲ್ಲಿ 98,642 ಪುರುಷರು ಹಾಗೂ 92,522 ಮಹಿಳಾ ಮತದಾರರು ಮತದಾನ ಮಾಡಿದ್ದಾರೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ಅಂಧ ಮತದಾರರೊಬ್ಬರ ಮತ ಚಲಾವಣೆಯಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು. ಪೊಲೀಸರು ಹಾಗೂ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸಂಡೂರು ಕ್ಷೇತ್ರದಲ್ಲಿ ಶೇ 76.24ರಷ್ಟಿ ಮತದಾನ

ಸಂಡೂರು ಕ್ಷೇತ್ರದಲ್ಲಿ ಬೆಳಗ್ಗೆ 7ಕ್ಕೆ ಸರಿಯಾಗಿ ಕ್ಷೇತ್ರದಾದ್ಯಂತ ಮತದಾನ ಆರಂಭವಾಯಿತು. 9 ಗಂಟೆ ಹೊತ್ತಿಗೆ ಶೇ 10.11 ಮತದಾನವಾಗಿತ್ತು. 11 ಗಂಟೆಗೆ ಹೊತ್ತಿಗೆ ಶೇ 25.96, ಮದ್ಯಾಹ್ನ 1ಕ್ಕೆ ಶೇ 43.46, 3 ಗಂಟೆಗೆ ಶೇ 58.27, ಸಂಜೆ 5 ಗಂಟೆಗೆ 71.47ರಷ್ಟು, 6 ಗಂಟೆ ಹೊತ್ತಿಗೆ ಶೇ 75.31ರಷ್ಟು ಮತದಾನ ನಡೆದಿತ್ತು.

ಬಹುತೇಕ ಶಾಂತಿಯುತವಾಗಿ ನಡೆದ ಮತದಾನದಲ್ಲಿ ಅಂದಾಜು ಶೇ 76.24ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ವೇಳೆ ಶೇ 77.07ರಷ್ಟು ಮತದಾನವಾಗಿತ್ತು. ಕಳೆದ ಲೋಕಸಭಾ ಚುನಾವಣೆ ವೇಳೆ ಶೇ.75.16 ರಷ್ಟು ಮತದಾನವಾಗಿತ್ತು.

ಮೂರೂ ಕ್ಷೇತ್ರಗಳಲ್ಲಿ ಮತ ಎಣಿಕೆ ನ. 23ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.