ಸೆಂಚುರಿಯನ್: ಇಲ್ಲಿನ ಸೂಪರ್ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 2–1ರಿಂದ ಮುನ್ನಡೆ ಸಾಧಿಸಿದೆ.

ಸೂಪರ್ಸ್ಪೋರ್ಟ್ ಮೈದಾನದಲ್ಲಿ ಬುಧವಾರ ರಾತ್ರಿ ರೆಕ್ಕೆ ಇರುವೆಗಳ ದೊಡ್ಡ ಸಂಖ್ಯೆಯ ಹಾರಾಟದಿಂದಾಗಿ ಅರ್ಧ ಗಂಟೆ ಆಟ ಸ್ಥಗಿತವಾಯಿತು.

ಭಾರತ ತಂಡವು ಒಡ್ಡಿದ್ದ 219 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೇ 7 ರನ್ ಗಳಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು.

ದಕ್ಷಿಣ ಆಫ್ರಿಕಾದಲ್ಲಿ ಕೀಟಗಳ ಕಾಟದಿಂದಾಗಿ ಪಂದ್ಯ ಸ್ಥಗಿತವಾಗಿದ್ದು ಇದೇ ಮೊದಲೇನಲ್ಲ. 2017ರಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿಯೂ ಸುಮಾರು ಒಂದು ಗಂಟೆ ಕಾಲ ಕೀಟಗಳಿಂದಾಗಿ ಅಟ ಸ್ಥಗಿತವಾಗಿತ್ತು.

ತಿಲಕ್ ವರ್ಮ ಅಜೇಯ ಶತಕ (107; 56ಎಸೆತ) ಮತ್ತು ಅಭಿಷೇಕ್ ಶರ್ಮಾ ಅವರ ಅಬ್ಬರದ ಅರ್ಧಶತಕದ ಬಲದಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 219 ರನ್ ಗಳಿಸಿತು. ಇದಕ್ಕುತ್ತರವಾಗಿ ಆತಿಥೇಯ ತಂಡವು 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 208 ರನ್ ಗಳಿಸಿತು.

ಕೊನೆಯ ಹಂತದಲ್ಲಿ ಮಾರ್ಕೊ ಯಾನ್ಸೆನ್ ಅವರು ಸಿಡಿಲಬ್ಬರದ ಅರ್ಧಶತಕ (54; 17ಎ, 4X4, 6X5) ಹೊಡೆದು ದಕ್ಷಿಣ ಆಫ್ರಿಕಾಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. ನಾಟಕೀಯ ತಿರುವು ಕಂಡ ಕೊನೆಯ ಓವರ್ನ ಎರಡನೇ ಎಸೆತದಲ್ಲಿ ಯಾನ್ಸೆನ್ ಒಂದು ಸಿಕ್ಸರ್ ಹೊಡೆದರು. ನಂತರದ ಎಸೆತದಲ್ಲಿ ಅವರನ್ನು ಎಲ್ಬಿ ಬಲೆಗೆ ಕೆಡವಿದ ಅರ್ಷದೀಪ್ ಸಿಂಗ್ ಮಿಂಚಿದರು. ಭಾರತ 11 ರನ್ಗಳಿಂದ ಜಯಿಸಿತು. ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತು. ಇನ್ನೊಂದು ಪಂದ್ಯ ಬಾಕಿ ಇದೆ.
.IND vs SA 3ನೇ ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 11 ರನ್ಗಳ ಜಯ.IND vs SA 3ನೇ ಟಿ20: ತಿಲಕ್ ಚೊಚ್ಚಲ ಶತಕ; ಹರಿಣಗಳ ಗೆಲುವಿಗೆ 220 ರನ್ಗಳ ಗುರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.