ಮೋಳೆ: ಹದಿನೈದು ದಿನಗಳಿಂದ ಎಡೆಬಿಡದೇ ಬಿರುಸಿನ ಪ್ರಚಾರ ನಡೆಸಿದ್ದ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಶುಕ್ರವಾರ ರಿಲ್ಯಾಕ್ಸ್ ಮೂಡ್ನಲ್ಲಿ ಕಾಲ ಕಳೆದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ರಾಜು ಕಾಗೆ ಹಾಗೂ ಬಿಜೆಪಿಯ ಶ್ರೀಮಂತ ಪಾಟೀಲ ನಡುವೆ ಪೈಪೋಟಿ ಏರ್ಪಟಿದ್ದು, ಎರಡೂ ಪಕ್ಷಗಳು ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದವು. ಹೀಗಾಗಿ, ಪ್ರಚಾರದ ಭರಾಟೆ ಬಿರುಸಾಗಿ ನಡೆದಿತ್ತು. ಗುರುವಾರ ಮತದಾನ ಮುಗಿದಿರುವುದರಿಂದ ಅಭ್ಯರ್ಥಿಗಳು ನಿರಾಳರಾಗಿದ್ದಾರೆ. ರಾಜು ಕಾಗೆ ಸೇರದಿಂತೆ ಬಹುತೇಕ ಅಭ್ಯರ್ಥಿಗಳು ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದರು.

ಕಾಗೆ, ಮನೆಗೆ ಬಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರನ್ನು ಭೇಟಿಯಾದರು. ಯಾವ್ಯಾವ ಮತಗಟ್ಟೆಯಲ್ಲಿ ಎಷ್ಟೆಷ್ಟು ಮತಗಳು ಬರಬಹುದೆಂಬ ಲೆಕ್ಕಾಚಾರ ಕುರಿತೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಕ್ಷೇತ್ರದಲ್ಲಿನ ತಮ್ಮ ಅನುಭವಗಳನ್ನು ಮುಖಂಡರು ಹಂಚಿಕೊಂಡರು.

ಮುಖಂಡರಾದ ರವೀಂದ್ರ ಗಾಣಿಗೇರ, ತಾತ್ಯಾಸಾಬ ಕುಚನೂರೆ, ಅಶೋಕ ಗಾಣಿಗೇರ, ಗಜಾನನ ಯರಂಡೋಲಿ, ಸುರೇಶ ಗಾಣಿಗೇರ, ಸಂಜಯ ಭಿರಡಿ, ಆದಿನಾಥ ದಾನೊಳ್ಳಿ, ಬಾಹುಬಲಿ ಕುಸನಾಳೆ, ಸಂಜು ಕುಸನಾಳೆ, ಅರುಣ ಗಾಣಿಗೇರ, ರಾಹುಲ ಕಟಗೇರಿ, ಗುರುರಾಜ ಮಡಿವಾಳರ, ಮುರಗೆಪ್ಪ ಮಹಾಜನ, ಮಲ್ಲಪ್ಪ ಪಾಟೀಲ, ವಿಶ್ವನಾಥ ನಾಮದಾರ, ಅನಿಲ ಸತ್ತಿ, ಬಸನಗೌಡ ಪಾಟೀಲ, ಕಾಮಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.