ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಒಟ್ಟು 519 ನಾಮಪತ್ರಗಳು ಸಲ್ಲಿಕೆಯಾಗಿವೆ.

ಇಲ್ಲಿ 58 ವಾರ್ಡ್‌ಗಳಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಸೋಮವಾರ ಒಂದೇ ದಿನ ಒಟ್ಟು 434 ನಾಮಪತ್ರಗಳು ಸ್ವೀಕೃತವಾಗಿವೆ.

ನಾಮಪತ್ರ ಸಲ್ಲಿಕೆ ಆರಂಭವಾದ ಆ.16ರಿಂದ ಒಟ್ಟು 519 ನಾಮಪತ್ರಗಳು ಸಲ್ಲಿಕೆಯಾಗಿವೆ. ಸೋಮವಾರ ಸಂಜೆವರೆಗೂ ಸ್ವೀಕಾರ ಪ್ರಕ್ರಿಯೆ ನಡೆಯಿತು. ಮಧ್ಯಾಹ್ನ 3ರೊಳಗೆ ಟೋಕನ್ ಪಡೆದಿದ್ದವರಿಗೆ ಅವಕಾಶ ಕೊಡಲಾಯಿತು. ಪಾಲಿಕೆಯ 5 ಕಚೇರಿಗಳಲ್ಲಿ ತೆರೆದಿದ್ದ 12 ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಯಿತು. ಒಟ್ಟು ಸ್ವೀಕೃತವಾದ ನಾಮಪತ್ರಗಳ ವಿವರವನ್ನು ಚುನಾವಣಾಧಿಕಾರಿ ಕಾರ್ಯಾಲಯದಿಂದ ತಡರಾತ್ರಿ ಬಿಡುಗಡೆ ಮಾಡಲಾಯಿತು.

ಬಿಜೆಪಿಯು ಎಲ್ಲ 58 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷದವರು 49 ವಾರ್ಡ್‌ಗಳಿಗಷ್ಟೆ ಸ್ಪರ್ಧಿಸಿದ್ದಾರೆ. ಜೆಡಿಎಸ್ 12, ಆಮ್ ಆದ್ಮಿ ಪಕ್ಷ 28, ಉತ್ತಮ ಪ್ರಜಾಕೀಯ ಪಕ್ಷದಿಂದ 1, ಎಐಎಂಐಎಂ ಪಕ್ಷದಿಂದ 6 ಹಾಗೂ ಎಸ್‌ಡಿಪಿಐನಿಂದ 1 ಮತ್ತು ಪಕ್ಷೇತರರಿಂದ 364 ನಾಮಪತ್ರಗಳು ಸಲ್ಲಿಕೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.