ಬೆಳಗಾವಿ: ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಡರಾತ್ರಿ 15 ಆರೋಪಿಗಳನ್ನು ಪೊಲೀಸರು ಬಂಧಿಸಿದರು.

ಗ್ರಾಮದ ಬೈರೋನಾಥ ದೇವಸ್ಥಾನಕ್ಕೆ ಸೇರಿದ ಜಮೀನು ಉಳಿಸಲು ಸತೀಶ ಪಾಟೀಲ (37) ಅವರು ಹೋರಾಟ ನಡೆಸಿದ್ದರು. ಶನಿವಾರ ತಡರಾತ್ರಿ ಅವರ ಕೊಲೆಯಾದ ಕಾರಣ ಹಿಂಸಾಚಾರ ಭುಗಿಲೆದ್ದಿತು. ಇದರಲ್ಲಿ ನಾಲ್ಕು ಕಾರು, ಒಂದು ಟ್ರ್ಯಾಕ್ಟರ್, ಎರಡು ಟೆಂಪೊ,ಹುಲ್ಲಿನ ಬಣವೆಗೆ ಬೆಂಕಿ ಹಚ್ಚಲಾಗಿದೆ. ಗ್ರಾಮದ ಹಲವು ಮನೆಗಳ ಮೇಲೆ ಕಲ್ಲು ತೂರಾಟ ಕೂಡ ನಡೆಯಿತು.

ಇದನ್ನೂ ಓದಿ:ಗೌಂಡವಾಡ: ದೇವಸ್ಥಾನ ಜಮೀನು ವಿವಾದ, ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ

ಇದರಿಂದ ಬೆಚ್ಚಿಬಿದ್ದ ಗ್ರಾಮದ ಹಲವು ಜನ ರಾತ್ರಿಯೇ ಊರು ತೊರೆದರು. ಮತ್ತೆ ಕೆಲವರು ಮನೆಗಳಿಗೆ ಒಳಗಿನಿಂದಲೇ ಬೀಗ ಹಾಕಿಕೊಂಡರು.

ಪೊಲೀಸರು ಗಸ್ತು ಬಂದಾಗ ಕೆಲವು ಯುವಕರು ಅವರ ಮೇಲೂ ಹರಿಹಾಯ್ದರು.

ಇದನ್ನೂ ಓದಿ:ಬೆಳಗಾವಿ | ಗೌಂಡವಾಡದಲ್ಲಿ ಪರಿಸ್ಥಿತಿ ಹತೋಟಿಗೆ: ಕಮಿಷನರ್

'ನಮ್ಮ ಸಮುದಾಯದ ಜಾಗಕ್ಕೆ ಬಂದು ನಮ್ಮನ್ನು ಹೊಡೆದಿದ್ದಾರೆ. ತುಳಿತಕ್ಕೊಳಗಾದ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಪೊಲೀಸರು ಕೂಡ ನಮ್ಮವರನ್ನೇ ಹೊಡೆದು ಹೋಗಿದ್ದಾರೆ. ಬೆಳಿಗ್ಗೆ ಎಲ್ಲರೂ ಕೊಡುತ್ತೇವೆ. ಇವರನ್ನು ನೋಡಿಕೊಳ್ಳುತ್ತೇವೆ' ಎಂದೂ ಯುವಕರ ಗುಂಪೊಂದು ಕೂಗಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.