ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ಅರಬಾವಿ ಶಾಸಕ, ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಮೂರು ಸ್ಥಾನಗಳಿಗೆ ಮಾತ್ರ ಮಾರ್ಚ್ 17ರಂದು ಚುನಾವಣೆ ನಡೆಯಲಿದೆ.

ವಿವೇಕರಾವ್ ಪಾಟೀಲ (ರಾಯಬಾಗ), ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಗೋಕಾಕ), ಮಲ್ಲಪ್ಪ ಬಾಳಪ್ಪ ಪಾಟೀಲ (ಮೂಡಲಗಿ), ಕಲ್ಲಪ್ಪ ನಿಂಗಪ್ಪ ಗಿರೆನ್ನವರ (ಬೆಳಗಾವಿ), ಬಸವರಾಜ ಮ. ಪರವಣ್ಣನವರ (ಕಿತ್ತೂರು), ಬಾಬುರಾವ ಸತ್ಯಪ್ಪ ವಾಘಮೋಡೆ (ಕಾಗವಾಡ), ವಿರೂಪಾಕ್ಷಿ ಬಾಳಪ್ಪ ಈಟಿ (ಚಿಕ್ಕೋಡಿ), ರಾಯಪ್ಪ ಬಾಳಪ್ಪ ಡೂಗ (ಹುಕ್ಕೇರಿ), ಪ್ರಕಾಶ ಯಲ್ಲಪ್ಪ ಅಂಬೋಜಿ (ಖಾನಾಪುರ), ಸಂಜಯ ಶ್ರೀಶೈಲಪ್ಪ ಶಿಂತ್ರೆ (ನಿಪ್ಪಾಣಿ), ಸದೆಪ್ಪ ಬಸಲಿಂಗಪ್ಪ ವಾರಿ (ಸವದತ್ತಿ), ಶಂಕರ ಕೆಂಚಪ್ಪ ಇಟ್ನಾಳ (ಯರಗಟ್ಟಿ), ಸವಿತಾ ಸುರೇಶ ಖಾನಪ್ಪಗೋಳ (ಮೂಡಲಗಿ– ಮಹಿಳಾ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ರಾಜಶ್ರೀ ಜೈನಾಪುರ ಪ್ರಕಟಿಸಿದರು.

ಅಥಣಿ, ಬೈಲಹೊಂಗಲ ಮತ್ತು ರಾಮದುರ್ಗ ಕ್ಷೇತ್ರಗಳಿಗೆ ತಲಾ ಒಂದೊಂದು ಸ್ಥಾನಗಳಿಗೆ 17ರಂದು ಚುನಾವಣೆ ನಡೆಯಲಿದೆ ಎಂದು ಜೈನಾಪುರ ತಿಳಿಸಿದರು. ನಾಮಪತ್ರಗಳನ್ನು ವಾಪಸ್ಸು ಪಡೆಯಲು ಸೋಮವಾರ ಕಡೆಯ ದಿನವಾಗಿತ್ತು.

‘17ರಂದು ಜಿಲ್ಲಾ ಹಾಲು ಒಕ್ಕೂಟಕ್ಕೆ ಚುನಾವಣೆ ನಿಗದಿಯಾಗಿದ್ದು, ರೈತರು ಮತ್ತು ಸಹಕಾರಿಗಳ ಸಹಕಾರದಿಂದ ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಕಳೆದ ಮೂರು ಅವಧಿಗಳಿಂದ ಈ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಈ ಬಾರಿಯೂ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುತ್ತಿದೆ. ಆದರೂ ಕೆಲವರಲ್ಲಿ ಹೊಂದಾಣಿಕೆ ಕೊರತೆಯಿಂದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ’ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

‘ಈ ಮೂರೂ ಸ್ಥಾನಗಳು ಸಹ ತಮ್ಮ ನೇತೃತ್ವದ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಸಹಕಾರ ತತ್ವಗಳನ್ನು ಪಾಲನೆ ಮಾಡಿಕೊಂಡು ಹಾಲು ಒಕ್ಕೂಟದ ಪ್ರಗತಿಗೆ ಶ್ರಮಿಸುತ್ತಿರುವ ರೈತರ ಸಂಸ್ಥೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಚುನಾವಣೆಯನ್ನು ನಡೆಸಲಾಗಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಸಹ ಸಹಕಾರ ನೀಡಿದ್ದಾರೆ’ ಎಂದರು.

‘ಮುಂದಿನ ಐದು ವರ್ಷಗಳ ಅವಧಿಯಲ್ಲಿ ಒಕ್ಕೂಟವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲಾಗುವುದು. ರೈತರು, ಹಾಲು ಉತ್ಪಾದಕರು ಮತ್ತು ನೌಕರರ ಆಶಯದಂತೆ ಒಕ್ಕೂಟದ ಬಲವರ್ಧನೆಗೆ ಸಹಕಾರ ತತ್ವದಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿ’ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.