ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಬುಧವಾರ ರಾತ್ರಿ ಚಂಡೆಮೇಳದ ಕಲಾವಿದರು ಪ್ರದರ್ಶನ ನೀಡಿದರು
ರಂಜಿಸಿದ ಚಂದನಶೆಟ್ಟಿ ತಂಡ
ಬುಧವಾರ ತಡರಾತ್ರಿಯವರೆಗೂ ನಡೆದ ರಸಮಂಜರಿಯಲ್ಲಿ ಗಾಯಕ ಚಂದನಶೆಟ್ಟಿ ತಂಡದವರು ರಂಜಿಸಿದರು. ‘ಮಹಾಪ್ರಾಣ ದೀಪಂ ಶಿವಂ ಶಿವಂ...’ ಚಿತ್ರಗೀತೆ ಹಾಡುತ್ತಿದ್ದಂತೆಯೇ ವೇದಿಕೆ ಮುಂದಿದ್ದ ಜನ ತಲೆದೂಗಿದರು. ಗಾಯಕಿ ವಸುಶ್ರೀ ಸುಶ್ರಾವ್ಯವಾಗಿ ಹಾಡಿದ ‘ಎಲ್ಲಿ ಕಾಣೆ ಎಲ್ಲಿ ಕಾಣೆ ಯಲ್ಲಮ್ಮನಂತಾಕಿನ ಎಲ್ಲಿ ಕಾಣೆ ಎಲ್ಲಿ ಕಾಣೆ’ ಎಂಬ ರೇಣುಕಾದೇವಿ ಕುರಿತಾದ ಭಕ್ತಿ ಗೀತೆ ಕೇಳುಗರನ್ನು ಮಂತ್ರಮುಗ್ಧವಾಗಿಸಿತು. ಗಾಯಕಿ ಗೀತ ಹಾಡಿದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಹಾಡು ತನ್ಮಯಗೊಳಿಸಿತು. ಗಾಯಕ ಚಂದನ ಶೆಟ್ಟಿ ಅವರು ‘ಕರಾಬು ಬಾಸು ಕರಾಬು’ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಅಂತಿದೆ’ ‘ಟಗರು ಟಗರು’ ಪಕ್ಕಾ ಚಾಕೊಲೇಟ್ ಗರ್ಲ್’ ಹಾಡುಗಳಿಗೆ ಯುವಪಡೆ ಕುಣಿದು ಕುಪ್ಪಳಿಸಿತು.