ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಆರು ದಿನಗಳ ಹಿಂದೆ ಅಪಹರಣವಾಗಿದ್ದ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಬುಧವಾರ ಪತ್ತೆ ಹೆಚ್ಚಿದ ಪೊಲೀಸರು, ಸುರಕ್ಷಿತವಾಗಿ ಕರೆತಂದರು.

ಹಾವೇರಿ ಜಿಲ್ಲೆಯ ಬಂಕಾಪುರದ ಬಳಿ ನಾಗರಾಜ ಹಾಗೂ ಅವರನ್ನು ಅಪಹರಣ ಮಾಡಿದ್ದ ಮೂವರು ಆರೋಪಿಗಳು ಪತ್ತೆಯಾದರು. ಹೇಬಿಯಸ್ ಕಾರ್ಪಸ್ ದಾಖಲಿಸಿದ ಕಾರಣ, ನಾಗರಾಜ ಅವರನ್ನು ಬೈಲಹೊಂಗಲದ ಜೆಎಂಎಫ್ಸಿ ಪ್ರಥಮ ದರ್ಜೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಭಾರತೀಯ ನ್ಯಾಯ ಸುರಕ್ಷಾ ದಂಡ ಸಂಹಿತೆ 183ರ ಅಡಿ ನ್ಯಾಯಾಧೀಶರು ಹೇಳಿಕೆ ದಾಖಲಿಸಿಕೊಂಡರು.

ಆರೋಪಿಗಳಾದ ಪ್ರವೀಣ ಜಕ್ಕನಗೌಡರ, ಬಸವರಾಜ ಸಂಗೊಳ್ಳಿ, ಅಶೋಕ ಮಾಳಗಿ ಅವರನ್ನು ಕಿತ್ತೂರಿನ ಕಿರಿಯ ಶ್ರೇಣಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಸೆ.3ರಂದು ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್– ಬಿಜೆಪಿ ಕಡೆಗೆ ತಲಾ 10 ಮತಗಳು ಇದ್ದವು. ಚುನಾವಣೆಯಲ್ಲಿ ಬಿಜೆಪಿಯ ಒಂದು ಮತ ಕಡಿಮೆ ಮಾಡಲು ನಾಗರಾಜ ಅವರನ್ನು ಕಾಂಗ್ರೆಸ್ಸಿಗರೇ ಅಪಹರಣ ಮಾಡಿದ್ದರು ಎಂದು ಬಿಜೆಪಿ ಆರೋಪಿಸಿದೆ.

ನ್ಯಾಗರಾಜ ಪರವಾಗಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವಕಾಲತು ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.