ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನಲ್ಲಿ ಘಟಪ್ರಭಾ ನದಿಯ ಪ್ರವಾಹ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾದ 12 ಕಾಳಜಿ ಕೇಂದ್ರಗಳಲ್ಲಿ 350ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅಲ್ಲಿ ಲಭ್ಯವಿರುವ ಸೌಲಭ್ಯ ಬಳಸಿಕೊಂಡು, ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಾರೆ.

ವಡೇರಹಟ್ಟಿ, ಪಟಗುಂದಿ, ಮಸಗುಪ್ಪಿ, ಹುಣಶ್ಯಾಳ ಪಿಜಿ ಹೀಗೆ ಬೇರೆ ಬೇರೆ ಕಡೆಯಿರುವ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರು ಇದ್ದಾರೆ. ‘ಉಪಾಹಾರ, ಊಟ ಸಿಗುತ್ತಿದೆ. ಸಂತ್ರಸ್ತರ ಮಕ್ಕಳಿಗೆ ಶಿಕ್ಷಣವೂ ನೀಡಬೇಕು ಎಂಬ ಉದ್ದೇಶದಿಂದ ನಿತ್ಯವೂ ಪಾಠ ಮಾಡುತ್ತಿದ್ದೇವೆ’ ಎಂದು ಮೂಡಲಗಿ ಶೈಕ್ಷಣಿಕ ವಲಯದ ಶಿಕ್ಷಕರು ಹೇಳುತ್ತಾರೆ.

‘ಕಾಳಜಿ ಕೇಂದ್ರಗಳಲ್ಲಿ ಪಾಲಕರನ್ನು ಪೀಡಿಸುವ ಅಥವಾ ಸಮಯ ವ್ಯರ್ಥ ಮಾಡುವ ಬದಲು ಮಕ್ಕಳು ಕಲಿಕೆಯಲ್ಲಿ ತೊಡಗಲಿ ಎಂಬ ಕಾಳಜಿ ನಮ್ಮದು. ಶಿಕ್ಷಕರು ಆಸಕ್ತಿಯಿಂದ ಪಾಠ ಮಾಡಿ, ಮಕ್ಕಳು ಶಿಕ್ಷಣದಿಂದ ವಂಚಿತರು ಆಗದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಕಾಳಜಿ ಕೇಂದ್ರಗಳಲ್ಲಿನ ಮಕ್ಕಳನ್ನು ಒಂದೆಡೆ ಸೇರಿಸಿ, ಶಿಕ್ಷಕರು ಪಾಠ ಮಾಡುವರು, ಮಕ್ಕಳು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಅವರ ಪೋಷಕರು ಕೂಡ ಖುಷಿಯಾಗಿದ್ದಾರೆ’ ಎಂದು ವಡೇರಹಟ್ಟಿಯ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಆನಂದ ಹಮ್ಮನವರ ತಿಳಿಸಿದರು.

‘ಕಾಳಜಿ ಕೇಂದ್ರದಲ್ಲಿ ಮಕ್ಕಳ ಉತ್ಸಾಹ ಹೆಚ್ಚಾಗಿದೆ. ಅವರು ಸಮಯ ವ್ಯರ್ಥ ಮಾಡುವುದು ತಪ್ಪಿದೆ’ ಎಂದು ಹುಣಶ್ಯಾಳ ಪಿಜಿಯ ಕಾಳಜಿ ಕೇಂದ್ರದ ಸಂತ್ರಸ್ತೆ ಮಹಾದೇವಿ ಕುರಬೇಟ ಹೇಳಿದರು.

Highlights - null

Quote - ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ವಲಯದ ನದಿ ತೀರದ ಶಾಲೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುತ್ತಿದೆ –ಅಜಿತ್ ಮನ್ನಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಲಗಿ

Quote - ಸಂಜೆಯು ಕಾಳಜಿ ಕೇಂದ್ರಗಳಿಗೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತೇನೆ. ಸ್ವತಃ ಸಂತ್ರಸ್ತರಾಗಿದ್ದರೂ ಕೆಲ ಅತಿಥಿ ಶಿಕ್ಷಕರು ಕಾಳಜಿ ಕೇಂದ್ರಕ್ಕೆ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ –ರಾಜೀವ ಕೊಳದುರ ಶಿಕ್ಷಕ

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.