ಚಿಕ್ಕೋಡಿ: 'ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಕೀಳರಿಮೆಯಿಂದ ಪ್ರತಿಭೆ ಕಮರುತ್ತದೆ. ತಮ್ಮ ಆಸಕ್ತಿಯ ವಿಷಯದ ಕುರಿತು ಆಳವಾದ ಅಧ್ಯಯನಗೈದು ಶೈಕ್ಷಣಿಕ ಸಾಧನೆ ಜೊತೆಗೆ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಲು ಮಂದಾಗಬೇಕು' ಎಂದು ಬೆಳಗಾವಿಯ ರಾಮಕೃಷ್ಣ ಮಿಷನ್ನ ಮೋಕ್ಷಾತ್ಮಾನಂದಜೀ ಮಹಾರಾಜರು ಹೇಳಿದರು.

ಪಟ್ಟಣದ ಕೆಎಲ್ಇ ಸಂಸ್ಥೆಯ ಚಿದಾನಂದ ಬಸಪ್ರಭು ಕೋರೆ ಬಹುತಾಂತ್ರಿಕ ವಿದ್ಯಾಲಯದಲ್ಲಿ 2023-14ನೇ ಸಾಲಿನ ಪ್ರಥನ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

'ತಾಂತ್ರಿಕತೆ ಇಂದು ಬಹು ವಿಸ್ತಾರ ಪಡೆದುಕೊಂಡಿದೆ. ಇದರಲ್ಲಿ ಸಾಧನೆ ಮಾಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರಯೋಗಶೀಲತೆಯಿಂದ ಕೌಶಲವೃದ್ಧಿಯಾಗುತ್ತದೆ. ವಿದ್ಯಾರ್ಥಿ ಜೀವನದ ಸುವರ್ಣ ಅವಕಾಶವನ್ನು ವ್ಯರ್ಥವಾಗಿ ಕಳೆಯದೇ, ನಿರಂತರ ಪರಿಶ್ರಮದಿಂದ ವೈಯುಕ್ತಿಕ ಭವಿಷ್ಯ ರೂಪಿಸಿಕೊಳ್ಳುವ ಜೊತೆಗೆ ಸಮಾಜದ ಅಭ್ಯುದಯಕ್ಕೂ ತಮ್ಮದೇ ಆದ ಕೊಡುಗೆ ನೀಡಬೇಕು. ಜೀವನದಲ್ಲಿ ಆಧ್ಯಾತ್ಮಿಕತೆ, ಸಂಸ್ಕಾರ, ಸಂಸ್ಕೃತಿಯನ್ನೂ ಅಳವಡಿಸಿಕೊಂಡು ಸಾತ್ವಿಕ ಬದುಕು ನಡೆಸಬೇಕು' ಎಂದು ಸ್ವಾಮೀಜಿ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ದರ್ಶನ ಬಿಳ್ಳೂರ ಮಾತನಾಡಿ, ‘ವಿದ್ಯಾರ್ಥಿಗಳಿಗಾಗಿ 15 ದಿನಗಳ ಕಾಲ ಹಮ್ಮಿಕೊಂಡಿರುವ ಈ ಪೀಠಿಕೆ ಕಾರ್ಯಕ್ರಮ ಮುಂಬರುವ ಶೈಕ್ಷಣಿಕ ಬೆಳವಣಿಗೆಗೆ ಮುನ್ನುಡಿಯಾಗಲಿದೆ’ ಎಂದು ಹೇಳಿದರು.

ಪ್ರೊ. ನಾವಿ ಪರಿಚಯಿಸಿದರು. ಪ್ರೊ. ಪದ್ಮಾ ಮಾಳಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.