ಬೆಳಗಾವಿ: ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ಇಲ್ಲಿನ ಗಾಂಧಿ ನಗರದ ನಿವಾಸಿ ಮಡಿವಾಳ ಅಶೋಕ ರಾಯಬಾಗಕರ (26) ಅವರನ್ನು ಅಪಹರಿಸಿ, ಕರೆಂಟ್ ಶಾಕ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ. ಇದರೊಂದಿಗೆ ನಾಲ್ವರನ್ನು ಬಂಧಿಸಿದಂತಾಗಿದೆ.

ಧಾರವಾಡ ಜಿಲ್ಲೆ ಗರಗದ ನಿವಾಸಿಗಳಾದ ಸಿದ್ದಯ್ಯ ಚಿಕ್ಕೊಪ್ಪ, ಮಡಿವಾಳ ಕಾಳೆ, ಗುಲಾಬ್ ಪೀರಜಾದೆ ಬಂಧಿತರು. ಪ್ರಮುಖ ಆರೋಪಿ ಅಪ್ಪಾಸಾಬ್ ನದಾಫ್ ಎನ್ನುವವರನ್ನು ಕಳೆದ ವಾರ ಬಂಧಿಸಿದ್ದರು.

‘ಯುವಕನನ್ನು ಅಪಹರಿಸಿ ಹಲ್ಲೆ ನಡೆಸಿ, ಕರೆಂಟ್ ಶಾಕ್ ನೀಡಿದ ಆರೋಪ ಇವರ ಮೇಲಿದೆ. ಇನ್ನಿಬ್ಬರು ಆರೋಪಿಗಳಾದ ಉಳ್ಳವಯ್ಯ ಚಿಕ್ಕಮಠ, ಉದ್ದಪ್ಪ ಉಳವಣ್ಣವರ ಬಂಧನಕ್ಕೂ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಯುವಕನ ಆರೋಗ್ಯ ವಿಚಾರಿಸಿದ್ದ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹಾಗೂ ಇಲ್ಲಿನ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.