ಚನ್ನಮ್ಮನ ಕಿತ್ತೂರು: ‘ಬರ ಪೀಡಿತ ಪ್ರದೇಶದಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಶೀಘ್ರ ಪರಿಹಾರ ಧನ ವಿತರಣೆ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಚನ್ನಮ್ಮನ ಕಿತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಭೀಮಶೆಪ್ಪ ದುರ್ಗಣ್ಣವರ ಆಗ್ರಹಿಸಿದರು.

ಇಲ್ಲಿಯ ಗ್ರೇಡ್ 2 ತಹಶೀಲ್ದಾರ್ ರವೀಂದ್ರ ನೇಸರಗಿ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಮಾತನಾಡಿ, ‘ಪರಿಹಾರ ಧನ ಬಿಡುಗಡೆ ಮಾಡದಿರುವುದರಿಂದ ರೈತರು ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ’ ಎಂದು ದೂರಿದರು.

‘ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಸೋಯಾಬಿನ್, ಹೆಸರು, ಗೋವಿನಜೋಳ, ಭತ್ತ ಬಿತ್ತನೆ ಹಂಗಾಮು ಪ್ರಾರಂಭವಾಗಲಿದೆ. ಪರಿಹಾರ ಹಣ ರೈತರ ಕೈಸೇರಿದರೆ ಬೀಜ ಖರೀದಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಮುಖಂಡರಾದ ಸಿದ್ದಪ್ಪ ಪೂಜೇರ, ಮಹಾಂತೇಶ ಪಾಟೀಲ, ಬಾಲಚಂದ್ರ ಹವಳಕರ, ರುದ್ರಪ್ಪ ಎಮ್ಮಿ, ಜಗದೀಶ ನಾಡಗೌಡರ, ಮೆಹಬೂಬ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.