ಬೆಳಗಾವಿ: ದೀಪಾವಳಿ ಅಂಗವಾಗಿ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ಗೌಳಿ ಸಮುದಾಯದವರು ಮಂಗಳವಾರ ಆಯೋಜಿಸಿದ್ದ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನ ಸೆಳೆಯಿತು.

ವರ್ಷವಿಡೀ ತಮಗೆ ಹಾಲು ಕೊಟ್ಟು ಪೊರೆಯುವ ಎಮ್ಮೆಗಳನ್ನು ಸೋಮವಾರ ರಾತ್ರಿಯಿಂದಲೇ ಅಲಂಕರಿಸಿದ ಗೌಳಿಗರು, ಮಂಗಳವಾರ ಬೆಳಿಗ್ಗೆ ಅವುಗಳಿಗೆ ಶ್ರದ್ಧೆಯಿಂದ ಪೂಜೆ ಸಲ್ಲಿಸಿದರು.

ಇಲ್ಲಿನ ಗೊಂಧಳಿ ಗಲ್ಲಿ, ಕಂಗ್ರಾಳ ಗಲ್ಲಿ, ಅನಗೋಳ, ಟಿಳಕವಾಡಿಯ ಗೌಳಿ ಗಲ್ಲಿ ಮತ್ತಿತರ ಪ್ರದೇಶಗಳನ್ನು ಎಮ್ಮೆಗಳನ್ನು ಓಡಿಸಲಾಯಿತು.

ಯುವಕರು ಸೈಲೆನ್ಸರ್ ತೆಗೆದು, ಕರ್ಕಶ ಶಬ್ದ ಮಾಡುತ್ತ ವೇಗವಾಗಿ ಬೈಕ್ ಗಳನ್ನು ಓಡಿಸುತ್ತಿದ್ದರೆ, ಎಮ್ಮೆಗಳನ್ನು ಅವರನ್ನು ಹಿಂಬಾಲಿಸುತ್ತಿದ್ದ ದೃಶ್ಯ ರೋಮಾಂಚಕವಾಗಿತ್ತು.

ಎಮ್ಮೆಗಳ ಓಟ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.
.PHOTOS | ಬೆಳಗಾವಿ: ಕಣ್ಮನ ಸೆಳೆದ ಎಮ್ಮೆಗಳ ಓಟದ ಸ್ಪರ್ಧೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.