ಹುಕ್ಕೇರಿ: ಕಾರ್ಖಾನೆ ಅಭಿವೃದ್ಧಿಗೆ ಮತ್ತು ರೈತರ ಏಳ್ಗೆಗೆ ಸದಸ್ಯರು, ಕಬ್ಬು ಬೆಳೆಗಾರರು ಕೈಜೋಡಿಸಬೇಕೆಂದು ನಿಡಸೊಶಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಬುಧವಾರ ತಾಲ್ಲೂಕಿನ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 64ನೇ ಕಬ್ಬು ನುರಿಸುವ ಹಂಗಾಮಿನ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾರ್ಖಾನೆ ಸಂಸ್ಥಾಪಕ ದಿ.ಅಪ್ಪಣಗೌಡರು ಹಲವಾರು ಸಮಸ್ಯಗಳ ಮಧ್ಯೆ ಗಡಿ ಭಾಗದಲ್ಲಿ 6 ದಶಕಗಳ ಹಿಂದೆ ಆಗಿನ ಹಿರಿಯರೊಂದಿಗೆ ಸೇರಿಕೊಂಡು ಪ್ರತಿಯೊಂದು ಗ್ರಾಮಕ್ಕೆ ತೆರಳಿ ಕಾರ್ಖಾನೆಯ ಸ್ಥಾಪನೆ ಹಾಗೂ ಅದರಿಂದ ರೈತರಿಗೆ ಆಗುವ ಲಾಭ ವಿವರಿಸಿ ಷೇರು ಹಣ ಸಂಗ್ರಹಿಸಿ ಕಾರ್ಖಾನೆ ಪ್ರಾಂಭಿಸಿದ್ದು, ಸಾವಿರಾರು ಕುಟುಂಬಗಳಿಗೆ ಆಶ್ರಯದಾತರಾಗಿದ್ದಾರೆ ಎಂದರು.

ನಿರ್ದೇಶಕ ಬಸವರಾಜ ಕಲ್ಲಟ್ಟಿ ದಂಪತಿ ಹಾಗೂ ಹುನ್ನೂರ ವಿಠ್ಠಲ ದೇವರ ಪೂಜಾರಿ ಪೂಜೆ ನೇರವೇರಿಸಿದರು.ಇದೇ ಸಂದರ್ಭದಲ್ಲಿ ಸಹಕಾರಿ ಅಪ್ಪಣಗೌಡರ 50ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಪ್ಪಣಗೌಡರ ಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಗುರಿ: ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ ಪ್ರಸಕ್ತ ಹಂಗಾಮಿನಲ್ಲಿ 12 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ಕಾರ್ಖಾನೆಯ ಸದಸ್ಯರು ಹಾಗೂ ಕಬ್ಬು ಬೆಳೆಗಾರ ರೈತರು ತಾವು ಬೆಳೆದ ಪೂರ್ತಿ ಕಬ್ಬನ್ನು ಕಾರ್ಖಾನೆಗೆ ಕಳುಹಿಸಲು ವಿನಂತಿಸಿದರು.

ಬೋನಸ್: ಇದೇ ಸಂದರ್ಭದಲ್ಲಿ ಕಾರ್ಖಾನೆಯ ಕಾರ್ಮಿಕರಿಗೆ ಶೇ 8.33 ರಷ್ಟು ಬೊನಸನ್ನು ಘೋಷಿಸಲಾಯಿತು ಮತ್ತು ಪುಣ್ಯತಿಥಿಯ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪವನ್ ಕತ್ತಿ, ನಿರ್ದೇಶಕರಾದ ಶಿವಪುತ್ರ ಶಿರಕೋಳಿ, ಪ್ರಭುದೇವ ಪಾಟೀಲ, ಸುರೇಶ ಬೆಲ್ಲದ, ಬಾಬಾಸಾಹೇಬ ಅರಬೋಳೆ, ಬಸು ಮರಡಿ, ಬಸವರಾಜ ಕಲ್ಲಟ್ಟಿ, ಸುರೇಂದ್ರ ದೊಡ್ಡಲಿಂಗನವರ, ವ್ಯವಸ್ಥಾಪಕ ನಿರ್ದೇಶಕ ಸಾತಪ್ಪ ಕರ್ಕಿನಾಯಿಕ, ಉದಯ ದೇಸಾಯಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.