ರಾಮದುರ್ಗ: ‘ಹಿಂದುಳಿದ, ಆರ್ಥಿಕವಾಗಿ ದುರ್ಬಲರಾಗಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಗುರಿ ಸಾಧಿಸಬೇಕು’ ಎಂದು ತಹಶೀಲ್ದಾರ್ ಸಿದ್ಧಾರೂಡ ಬನ್ನಿಕೊಪ್ಪ ಹೇಳಿದರು.

ಪಟ್ಟಣದ ಸಿ.ಎಸ್. ಬೆಂಬಳಗಿ ಕಾಲೇಜಿನ ಪ್ರಸಕ್ತ ವರ್ಷದ ಕ್ರೀಡಾ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿ, ‘ಸಮಯ ಪಾಲನೆ ಮತ್ತು ಆತ್ಮವಿಶ್ವಾಸ ಅಳಡಿಸಿಕೊಳ್ಳಿ’ ಎಂದರು.

ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಟಿ.ದಾಮೋದರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ ಸ್ವಾಗತಿಸಿದರು. ಜಿಮಖಾನಾ ಉಪಾಧ್ಯಕ್ಷ ಎಸ್.ಐ ಮಳಗಲಿ ಪರಿಚಯಿಸಿದರು.

ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು. ಡಾ.ಎಂ.ಎನ್. ಶಿದ್ಧಗಿರಿ ಮತ್ತು ಡಾ. ವಿ.ಎಂ.ಜಬಡೆ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಲೋಕೇಶ ಬ.ಮಾಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.