ಬೆಳಗಾವಿ: ‘ಇಲ್ಲಿಯ ಶಾಹುನಗರದ ಮೂರನೇ ಕ್ರಾಸ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ವಿದ್ಯುತ್ ದುರಂತದಲ್ಲಿ ಸಾವಿಗೀಡಾದ ಮೂವರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅವರು ಘಟನೆ ಪರಿಶೀಲಿಸಿ, ಸ್ಥಳದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಘಟನೆಯ ಮಾಹಿತಿ ನೀಡಿದರು. ಬಡ ಕುಟುಂಬಕ್ಕೆ ಸಹಾಯ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ: ಬೆಳಗಾವಿ | ವಿದ್ಯುತ್ ಅವಘಡ: ಮರಣೋತ್ತರ ಪರೀಕ್ಷೆಗೆ ಶವಗಳ ಸಾಗಣೆ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ‘ಘಟನೆಯಿಂದ ತೀವ್ರ ನೋವಾಗಿದೆ. ದುಡಿಯಲು ಬಂದ ಜನರಿಗೆ ಈ ರೀತಿ ಅವಘಡ ಸಂಭವಿಸಬಾರದು. ತನಿಖೆ ನಂತರ ಘಟನೆಯ ಪೂರ್ಣ ವಿವರ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದು, ಸದ್ಯ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಲಕ್ಷ್ಮೀತಾಯಿ ಫೌಂಡೇಷನ್‌ನಿಂದ ಕೂಡ ತುರ್ತು ನೆರವು ನೀಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.