ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2019–20ನೇ ಸಾಲಿನಲ್ಲಿ ಆರ್ಟಿಇ (ಕಡ್ಡಾಯ ಶಿಕ್ಷಣ ಹಕ್ಕು) ಯೋಜನೆಯಡಿ ಒಟ್ಟು 1,465 ಉಚಿತ ಸೀಟುಗಳನ್ನು ಕಾಯ್ದಿಸಲಾಗಿದ್ದು, ಪ್ರಥಮ ಹಂತದಲ್ಲಿ 462 ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮೊದಲ ಹಂತದಲ್ಲಿ ಎಲ್ಲ ಎಂಟು ವಲಯಗಳ ವ್ಯಾಪ್ತಿಯಲ್ಲಿ ಒಟ್ಟು 718 ಅರ್ಜಿಗಳು ಸಲ್ಲಿಕೆಯಾಗಿದ್ದು, 64 ವಿದ್ಯಾರ್ಥಿಗಳು 1ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ.

ಗೋಕಾಕ ವಲಯದಲ್ಲಿ 129 ಸೀಟುಗಳು ಲಭ್ಯವಿದ್ದು, ಪ್ರಥಮ ಹಂತದಲ್ಲಿ 78 ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 197 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಇದುವರೆಗೆ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಅಥಣಿ ಮತ್ತು ಚಿಕ್ಕೋಡಿ ವಲಯದಲ್ಲಿ ತಲಾ 29 ವಿದ್ಯಾರ್ಥಿಗಳು ಪ್ರಥಮ ವರ್ಗಕ್ಕೆ ಆರ್ಟಿಇ ಅಡಿ ಪ್ರವೇಶ ಪಡೆದಿದ್ದಾರೆ. ಹುಕ್ಕೇರಿ, ಮೂಲಡಗಿ, ನಿಪ್ಪಾಣಿ ಮತ್ತು ರಾಯಬಾಗ ವಲಯಗಳಲ್ಲೂ ಇದುವರೆಗೆ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ.

ಎಂಟು ವಲಯಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ 87, ಪರಿಶಿಷ್ಟ ಪಂಗಡದಿಂದ 15, ಪ್ರವರ್ಗ– 1ರಿಂದ 49, ಹಿಂದುಳಿದ ವರ್ಗ 2‘ಎ’ನಿಂದ 116, 2‘ಬಿ’ಯಿಂದ 159, 3‘ಎ’ನಿಂದ 5, 3ಬಿಯಿಂದ 227 ಅರ್ಜಿಗಳು ಸಲ್ಲಿಕೆಯಾಗಿವೆ.

‘ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 1,465 ಉಚಿತ ಸೀಟುಗಳನ್ನು ಆರ್ಟಿಇ ಅಡಿ ಕಾಯ್ದಿಸಲಾಗಿದೆ. ಮೊದಲ ಹಂತದಲ್ಲಿ 462 ಸೀಟುಗಳಿಗೆ ಅರ್ಜಿ ಕರೆಯಲಾಗಿದ್ದು, 718 ಅರ್ಜಿಗಳು ಬಂದಿವೆ. 64 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕೆಲವು ವಲಯಗಳಲ್ಲಿ ಇನ್ನೂ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಶಾಲೆಗೆ ಸೀಟು ಹಂಚಿಕೆ ಆಗಿದೆ. ಅವರು ಪ್ರತಿಷ್ಠಿತ ಸಂಸ್ಥೆಗಳ ಶಾಲೆಗೆ ಪ್ರವೇಶ ಪಡೆಯಲು ಬಯಸುತ್ತಾರೆ. ಪ್ರವೇಶ ಪಡೆಯಲು ನಿರಾಕರಿಸುತ್ತಿರುವುದಕ್ಕೆ ಈ ಆಂಶ ಕಾರಣವಾಗಿರಬಹುದು’ ಎಂದು ಡಿಡಿಪಿಐ ಎಂ.ಜಿ. ದಾಸರ ತಿಳಿಸಿದರು.

‘ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಇಲಾಖೆಯಿಂದ ಪ್ರಯತ್ನಿಸಲಾಗುತ್ತಿದೆ. ಆರ್ಟಿಇ ಅಡಿ ಎರಡು ಹಂತದಲ್ಲಿ ನಿಗದಿಯಾಗಿರುವ ಸೀಟುಗಳು ತುಂಬದೇ ಇದ್ದಲ್ಲಿ ಮೂರನೇ ಹಂತದಲ್ಲಿ ಅರ್ಜಿಗಳನ್ನು ಕರೆದು ಸೀಟುಗಳಿಗೆ ಪ್ರವೇಶ ನೀಡಲಾಗುವುದು’ ಹೇಳಿದರು.

ಅಂಕಿ–ಅಂಶ
ವಲಯ; ಲಭ್ಯ ಸೀಟು; ಸಲ್ಲಿಕೆಯಾದ ಅರ್ಜಿ; ಪ್ರವೇಶ ಪಡೆದವರು
ಅಥಣಿ; 51;105;29
ಚಿಕ್ಕೋಡಿ; 98;132;29
ಗೋಕಾಕ; 78;197;00
ಹುಕ್ಕೇರಿ; 65;75;00
ಕಾಗವಾಡ; 41;67;06
ಮೂಡಲಗಿ; 57;69;00
ನಿಪ್ಪಾಣಿ; 08;08;00
ರಾಯಬಾಗ; 64;65;00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.