ಬೆಳಗಾವಿ: ‘ನಗರಪಾಲಿಕೆಯಿಂದ ಈ ವರ್ಷ ತೆರಿಗೆ ಪರಿಷ್ಕರಣೆ ಪ್ರಕ್ರಿಯೆ ಮುಂದೂಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಇಲ್ಲಿನ ಕಾಡಾ ಕಚೇರಿಯಲ್ಲಿ ಗುರುವಾರ ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಗರಪಾಲಿಕೆ ಮಾಜಿ ಸದಸ್ಯರ ಸಂಘದವರು, ಮಾಜಿ ಮೇಯರ್‌ಗಳು ಹಾಗೂ ಮಾಜಿ ಉಪ ಮೇಯರ್‌ಗಳನ್ನು ಒಳಗೊಂಡ ನಿಯೋಗಕ್ಕೆ ಈ ಭರವಸೆ ನೀಡಿದರು.

‘ಮಾರಕ ಕೊರೊನಾ ಹರಡುವುದನ್ನು ತಡೆಯಲು ಲಾಕ್‌ಡೌನ್ ಘೋಷಿಸಲಾಗಿದೆ. ಎರಡು ತಿಂಗಳುಗಳಿಂದ ಆರ್ಥಿಕ ಚಟುವಟಿಕೆ ಸ್ತಬ್ಧವಾಗಿದೆ. ಗಳಿಕೆ ಇಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಿರುವಾಗ ಮಹಾನಗರ ಪಾಲಿಕೆಯು ತೆರಿಗೆಯನ್ನು ಶೇ.25ರಷ್ಟು ಹೆಚ್ಚಿಸಿದೆ. ಇದು ಸರಿಯಲ್ಲ. ಹಳೆಯ ತೆರಿಗೆಯನ್ನು ಮುಂದುವರಿಸಬೇಕು’ ಎಂದು ನಿಯೋಗದವರು ಮನವಿ ಮಾಡಿದರು.

‘ಈ ಕುರಿತಂತೆ ಮಹಾನಗರ ಪಾಲಿಕೆ ಆಯುಕ್ತರ ಜೊತೆ ಚರ್ಚಿಸಿ, ಜನರಿಗೆ ಹೊರೆ ಆಗದಂತೆ ತೆರಿಗೆ ತುಂಬಿಕೊಳ್ಳುವಂತೆ ಸೂಚಿಸಲಾಗುವುದು’ ಎಂದು ಸಚಿವರು ತಿಳಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಿಯೋಗದಿಂದ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ನಾಗೇಶ ಸಾತೇರಿ, ಶಿವಾಜಿ ಸುಂಟಕರ್, ವಿಜಯ ಮೋರೆ, ಕಿರಣ ಸಾಯಿನಾಯ್ಕ, ಧನರಾಜ ಗೌಳಿ, ಸತೀಶ ಗೋರ್ಗೋಂಡ, ರೇಣು ಕಿಲ್ಲೇಕರ, ಗಣೇಶ ಪ್ರಭು, ರಂಜಿತ ಪಾಟೀಲ, ಶಿವನಗೌಡ ಪಾಟೀಲ, ಸುನೀಲ ಬಾಳೆಕುಂದ್ರಿ, ಅಜ್ಜಪ್ಪ ಬಡಿಗೇರ, ಸಂಭಾಜಿ ಚವಾಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.