ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಫಿಸಿಯೊಥೆರಪಿ ವಿಭಾಗದಿಂದ ವಿಶ್ವ ಕುಷ್ಠರೋಗ ದಿನದ ಅಂಗವಾಗಿ ಜಾಗೃತಿಗಾಗಿ ಸೋಮವಾರ ಆಯೋಜಿಸಿದ್ದ ಪೋಸ್ಟರ್ಗಳ ಪ್ರದರ್ಶನವನ್ನು ಕೆಎಲ್ಇ ಸಂಸ್ಥೆಯ ಅಸ್ಪತ್ರೆ ಅಭಿವೃದ್ಧಿ ಹಾಗೂ ಹೊಸ ಯೋಜನೆಗಳ ನಿರ್ದೇಶಕ ಡಾ.ವಿ.ಡಿ. ಪಾಟೀಲ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕುಷ್ಠ ರೋಗಿಗಳ ಸಹಾಯಕ್ಕೆ ಜನರು ನಿಲ್ಲಬೇಕು. 2017ರಲ್ಲಿ 2,78,619 ಜನ ಕುಷ್ಠ ರೋಗದಿಂದ ಬಳಲುತ್ತಿದ್ದರೆ, ಕಳೆದ ಸಾಲಿನಲ್ಲಿ 1.28 ಲಕ್ಷ ಜನರು ಕಂಡುಬಂದಿದ್ದಾರೆ. ಇದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಆ ಕಾಯಿಲೆಯ ಬಗೆಗಿನ ಮೂಢನಂಬಿಕೆ ತೊಲಗಬೇಕು’ ಎಂದು ಹೇಳಿದರು.

ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ‘ಅನೇಕ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖಗೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದರೂ ಭೌತಿಕ ಚಿಕಿತ್ಸೆ ರೋಗಿಗಳಿಗೆ ಅತ್ಯವಶ್ಯವಾಗಿ ಬೇಕಾಗುತ್ತದೆ’ ಎಂದು ತಿಳಿಸಿದರು.

ಫಿಸಿಯೊಥೆರಫಿ ಕಾಲೇಜಿನ ಪ್ರಾಚಾರ್ಯ ಡಾ.ಸಂಜೀವಕುಮಾರ ಮಾತನಾಡಿ, ‘ಅಂಗವಿಕತೆ ಹಾಗೂ ಸಂಪೂಣವಾಗಿ ಕೈ ಅಥವಾ ಕಾಲುಗಳನ್ನು ಕಳೆದುಕೊಂಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃತಕ ಅಂಗಗಳನ್ನು ತಯಾರಿಸಲು ಕ್ರಮ ವಹಿಸಲಾಗುತ್ತಿದೆ. ಸಹಜ ಜೀವನ ಸಾಗಿಸುವಂತೆ ಅನುಕೂಲ ಮಾಡಿಕೊಡಲಾಗುತ್ತದೆ’ ಎಂದರು.

ಡಾ.ಶಿಬಾನಿ ಪ್ರಿಯದರ್ಶಿನಿ, ಡಾ.ರಿತಿಕೇಶ ಪಟ್ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.