ಅಥಣಿ: ತಾಲ್ಲೂಕಿನ ಕೃಷ್ಣಾ ನದಿ ಹಾಗೂ ಅಗ್ರಾಣಿ ಹಳ್ಳದ ತೀರದಲ್ಲಿ ಮತ್ತು ಪಕ್ಕದ ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.

ಈ ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದರೆ ನದಿಪಾತ್ರದ ಗ್ರಾಮಗಳಿಗೆ ತೊಂದರೆಯಾಗುವ ಆತಂಕ ಎದುರಾಗಿದೆ. ಇದು ಪ್ರಜ್ಞಾವಂತರ ಕಳವಳಕ್ಕೂ ಕಾರಣವಾಗಿದೆ.

‘ಕೋವಿಡ್–19 ಲಾಕ್ಡೌನ್ ಕೆಲಸದಲ್ಲಿ ನಿರತರಾಗಿರುವ ತಾಲ್ಲೂಕು ಆಡಳಿತ, ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಅಕ್ರಮ ಮಣ್ಣು ಗಣಿಗಾರಿಕೆಯತ್ತ ಗಮನಹರಿಸುತ್ತಿಲ್ಲ’ ಎಂದು ಆರೋಪಿಸಲಾಗುತ್ತಿದೆ.

‘ಹೊಲದಿಂದ ಮಣ್ಣು ತಗೆದರೆ ಅದನ್ನು ಹೊಲಗಳಿಗೆ ಮಾತ್ರ ಬಳಸಬೇಕು ಎನ್ನುವ ನಿಯಮವಿದೆ. ಆದರೆ, ಇತ್ತ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಗಮನಹರಿಸುತ್ತಿಲ್ಲ’ ಎಂದು ದೂರಲಾಗುತ್ತಿದೆ.

ನದಿ, ಹಳ್ಳದ ತಟದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆಯಿಂದಾಗಿ ನದಿ ಹರಿಯುವ ದಿಕ್ಕಿನಲ್ಲಿ ಬದಲಾವಣೆ ಸಾಧ್ಯತೆ ಇದೆ. ತಾಲ್ಲೂಕಿನಲ್ಲಿ ಹರಿದಿರುವ ಕೃಷ್ಣಾ ನದಿ ಹಾಗೂ ಅಗ್ರಾಣಿ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವುದನ್ನು ಬಳಸಿಕೊಂಡು ಸುತ್ತಮುತ್ತಲಿನ ಫಲವತ್ತಾದ ಮಣ್ಣನ್ನು ಬಗೆದು ಟಿಪ್ಪರ್ಗಳ ಮೂಲಕ ತಾಲ್ಲೂಕಿನ ವಿವಿಧೆಡೆ ಇರುವ ಇಟ್ಟಿಗೆ ತಯಾರಿಕಾ ಘಟಕಗಳಿಗೆ ಒದಗಿಸಲಾಗುತ್ತಿದೆ ಎಂಬ ಆರೋಪ ಜನರದಾಗಿದೆ.

‘ಅವರಖೋಡ, ಹಲ್ಯಾಳ, ದರೂರ, ಹುಲಗಬಾಳಿ, ಸಪ್ತಸಾಗರ, ತೀರ್ಥ, ಶಿವನೂರ, ದೊಡವಾಡ, ಮೊಳವಾಡ, ಮಸರಗುಪ್ಪಿ, ಶಿವನೂರ ಗ್ರಾಮಗಳಲ್ಲಿನ ಫಲವತ್ತಾದ ಮಣ್ಣನ್ನು ಅಕ್ರಮವಾಗಿ ರಾತ್ರಿ ವೇಳೆ ವಾಹನಗಳ ಮೂಲಕ ಸಾಗಿಸಲಾಗುತ್ತಿದೆ. ಹೊಲಗಳಿಗೆ ಎಂದು ಹೇಳಿ ಇಟ್ಟಿಗೆ ಘಟಕಗಳಿಗೆ ಸಾಗಿಸಲಾಗುತ್ತಿದೆ. ತಾಲ್ಲೂಕು ಆಡಳಿತ ಗೊತ್ತಿದ್ದರೂ ತಡೆಯದಿರುವುದು ಅಚ್ಚರಿ ಮೂಡಿಸುತ್ತಿದೆ’ ಎನ್ನುತ್ತಾರೆ ಅವರು.

ಮೇ 31ರಂದು ಮುಂಜಾನೆ 2ಕ್ಕೆ ಕೆಲವು ಪ್ರತಕರ್ತರರು ಹಾಗೂ ಸಾರ್ವಜನಿಕರು ಮಣ್ಣು ಸಾಗಿಸುತ್ತಿದ್ದ ಮೂರು ಟಿಪ್ಪರ್ಗಳನ್ನು ತಡೆದಿದ್ದರು. ಪೊಲೀಸರಿಗೆ ವಿಷಯ ತಿಳಿಸಿದ್ದರು. ಆದರೆ, ಪೊಲೀಸರು ಒಂದು ಟಿಪ್ಪರ್ ಮಾತ್ರ ವಶಕ್ಕೆ ಪಡೆದು ಇನ್ನೆರಡನ್ನು ಬಿಟ್ಟು ಹೋಗಿದ್ದಾರೆ. ಒಂದು ಟಿಪ್ಪರ್ಗೆ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಮಣ್ಣು ತೆಗೆದಿರುವ ಸ್ಥಳಗಳಲ್ಲಿ ಹತ್ತಾರು ಅಡಿಗಳಷ್ಟು ಆಳದ ಕಂದಕಗಳು ಸೃಷ್ಟಿಯಾಗಿದ್ದು, ಅಲ್ಲಿಗೆ ದನ–ಕರುಗಳು ಬಿದ್ದ ಪ್ರಸಂಗಗಳು ಕೂಡ ನಡೆದಿವೆ ಎಂದು ತಿಳಿಸಿದರು. ನೈಸರ್ಗಿಕ ಸಂಪನ್ಮೂಲವನ್ನು ಕಾಪಾಡಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯೆ

ಅಕ್ರಮ ಮಣ್ಣು ಗಣಿಗಾರಿಕೆ ಮಾಡುತ್ತಿರುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಯಾರೇ ಆ ಕೃತ್ಯದಲ್ಲಿ ತೊಡಗಿದ್ದರೂ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸುವೆ
- ಎಸ್.ವಿ. ಗಿರೀಶ, ಅಥಣಿ ಡಿಎಸ್ಪಿ

ಮಣ್ಣು ಗಣಿಗಾರಿಕೆಗೆ ಸಂಬಂಧಿಸಿದಂತೆ ಈಗಾಗಲೇ ಒಂದೆರಡು ವಾಹನಗಳನ್ನು ಹಿಡಿದು ದಂಡ ಹಾಕಿದ್ದೇವೆ. ಇನ್ನೂ ಮುಂದುವರಿದರೆ ಕಠಿಣ ಕ್ರಮ ಜರುಗಿಸಲಾಗುವುದು
- ದುಂಡಪ್ಪ ಕೋಮಾರ, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.