ಬೈಲಹೊಂಗಲ: ‘ಸೋಮೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು ಅಂದಾಜು ಸರಾಸರಿ ಸಕ್ಕರೆ ಇಳುವರಿ ಪ್ರಮಾಣ ಶೇ 11.30 ರಂತೆ ಸಕ್ಕರೆ ಉತ್ಪಾದಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕು’ ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.

ಸೋಮೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗುರುವಾರ 2024-25 ಸಾಲಿನ, ಬಾಯ್ಲರ್ ಪ್ರದಿಪನ ಮತ್ತು ಕಬ್ಬು ಅರೆಯುವ ಹಂಗಾಮ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಬ್ಬು ಬೆಳೆಗಾರರು ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕಬ್ಬು ಕಟಾವು ಗ್ಯಾಂಗ್ ವ್ಯವಸ್ಥೆ ಮಾಡಲಾಗಿದ್ದು, ಕಾರ್ಖಾನೆಯಿಂದ 100 ಕೆಎಲ್ಪಿಡಿ ಇಥೇನಾಲ್ ಘಟಕ ಸ್ಥಾಪನೆ, ಕಬ್ಬು ಅರೆಯುವ ಸಾಮರ್ಥ್ಯವನ್ನು 2500 ಟಿಸಿಡಿಯಿಂದ 4500 ಟಿಸಿಡಿ ಸಾಮರ್ಥ್ಯಕ್ಕೆ ಮತ್ತು ಕೋ ಜನರೇಶನ್ ಘಟಕದ ಸಾಮರ್ಥ್ಯವನ್ನು 6 ಮೆಗಾವ್ಯಾಟ್ನಿಂದ 12 ಮೆಗಾವ್ಯಾಟ್ ಸಾಮರ್ಥ್ಯಕ್ಕೆ ವಿಸ್ತರಣೆ ಮತ್ತು ಆಧುನೀಕರಣಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು, ಕಾರ್ಮಿಕರು ಸಿಬ್ಬಂದಿ ವರ್ಗ ರೈತರು ಹೆಚ್ಚು ಪ್ರಮಾಣದಲ್ಲಿ ಕಬ್ಬು ಪೂರೈಸಲು ಹೆಚ್ಚಿನ ಒತ್ತು ನೀಡಬೇಕು ಎಂದರು.

ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ನಯಾನಗರ ಅಭಿನವ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ‘ಕಾರ್ಖಾನೆ ಹುಟ್ಟು ಹಾಕಲು ದಿ.ಆರ್.ಸಿ.ಬಾಳೇಕುಂದರಗಿ ಮತ್ತು ಅವರ ಸಂಗಡಿಗರು ಹಗಲಿರುಳು ದುಡಿದು ಕಾರ್ಖಾನೆ ಹುಟ್ಟು ಹಾಕಿದ್ದು, ಹೆಚ್ಚಿನ ದರಕ್ಕೆ ಆಸೆ ಪಡದೆ ಸೋಮೇಶ್ವರ ಸಕ್ಕರೆ ಕಾರ್ಖಾನೆಗೆ ಈ ಭಾಗದ ರೈತರು ಗುಣ ಮಟ್ಟದ ಕಬ್ಬು ಪೂರೈಕೆ ಮಾಡಿ ಕಾರ್ಖಾನೆ ಪ್ರಗತಿಗೆ ಕೈ ಜೋಡಿಸಬೇಕು’ ಎಂದರು.

ನಿರ್ದೇಶಕ ಮಲ್ಲಪ್ಪ ಅಷ್ಟಗಿ ಮಾತನಾಡಿ, ಕಾರ್ಖಾನೆ ಆಧಾರ ಸ್ಥಂಭವಾಗಿದ್ದ ದಿ.ಆರ್.ಸಿ.ಬಾಳೇಕುಂದರಗಿ ಅವರ ಸೇವೆ ಅಪಾರವಾಗಿದೆ. ಅವರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಸಹಕಾರ ಕ್ಷೇತ್ರದಲ್ಲಿ ಒಂದು ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭದ ಕೆಲಸವಲ್ಲ. ಖಾಸಗಿ ಕಾರ್ಖಾನೆ ಪೈಪೋಟಿ ಮಧ್ಯೇ ಕಾರ್ಖಾನೆ ರೈತರಿಗೆ ಒಳ್ಳೆಯ ಸೇವೆ ನೀಡುತ್ತಿದೆ. ತಮ್ಮೆಲ್ಲರ ಸಹಕಾರ ಸದಾ ನೀಡಬೇಕು ಎಂದರು.

ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ವ್ಯವಸ್ಥಾಪಕ ನಿರ್ದೇಶಕ ಬೀರೇಂದ್ರ, ನಿರ್ದೇಶಕರಾದ ಪ್ರಕಾಶ ಮೂಗಬಸವ, ರಾಚಪ್ಪ ಮಟ್ಟಿ, ಅಶೋಕ ಯರಗೋಪ್ಪ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಅದೃಶಪ್ಪ ಕೊಟಬಾಗಿ, ಅಶೋಕ ಬಾಳೇಕುಂದರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.