ಬೆಳಗಾವಿಯ ರಾಮದೇವ್ ಹೋಟೆಲ್ ಬಳಿ ದಶಕದ ಹಿಂದೆ ನಿರ್ಮಿಸಿದ ಆಟೊ ಮುಂಗಡ ಟಿಕೆಟ್ ಕೌಂಟರ್ ಪಾಳುಬಿದ್ದಿದೆ
ಪ್ರಜಾವಾಣಿ ಚಿತ್ರ
ಮೀಟರ್ ಅಳವಡಿಸಿದರೆ ಅನುಕೂಲ. ಮಹಿಳೆಯರಿಗೆ ಉಚಿತ ಬಸ್ ಇದ್ದರೂ ಸಮಯಕ್ಕೆ ಬರುವುದಿಲ್ಲ. ಆಟೊ ಚಾಲಕರ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ
ಕಾವೇರಿ ಖಿಲಾರಿ ಉದ್ಯೋಗಿ
ಮೀಟರ್ ಚಾಲ್ತಿ ಮಾಡಿದರೆ ನಮಗೂ ಒಳ್ಳೆಯದೇ. ಆದರೆ ಅದಕ್ಕಿರುವ ಅಡಚಣೆ ಸಮಸ್ಯೆಗಳನ್ನೂ ನಿವಾರಣೆ ಮಾಡಬೇಕು. ಇಲ್ಲದಿದ್ದರೆ ನಷ್ಟವಾಗುತ್ತದೆ
ಮನ್ಸೂರ್ ಅಬ್ದುಲ್ ಗಫಾರ್ ಹೊನಗೇಕರ ಅಧ್ಯಕ್ಷ ಆಟೊ ಮಾಲೀಕರು ಹಾಗೂ ಚಾಲಕರ ಅಸೋಸಿಯೇಷನ್
ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಆಟೊಗಳಿಗೆ ಮೀಟರ್ ಅಳವಡಿಸಲಾಗುವುದು. ಆಟೊ ಚಾಲಕರು ಮಾಲೀಕರ ಸಭೆ ಕರೆದು ಚರ್ಚಿಸಲಾಗುವುದು
ನಾಗೇಶ ಮುಂಡಾಸ್ ಪ್ರಾದೇಶಿಕ ಸಾರಿಗೆ ಅಧಿಕಾರಿ
7 ಕಿ.ಮೀ ವ್ಯಾಪ್ತಿ 10274 ಆಟೊ!
ಬೆಳಗಾವಿ ನಗರ ಕೇಂದ್ರ ಸ್ಥಾನದಿಂದ 7 ಕಿ.ಮೀ ದೂರದಷ್ಟು ವ್ಯಾಪಿಸಿದೆ. ಈಗಾಗಲೇ 10274ಕ್ಕೂ ಹೆಚ್ಚು ಆಟೊಗಳು ಇವೆ. ಇದರಲ್ಲಿ 7893 ಆಟೊಗಳಿಗೆ ಮಾತ್ರ ಪರ್ಮಿಟ್ ಇವೆ. ನಗರದ ವ್ಯಾಪ್ತಿ ಗಮನಿಸಿದರೆ ಆಟೊಗಳ ಸಂಖ್ಯೆ ಅತಿ ಹೆಚ್ಚಾಯಿತು. ಈಗಲೂ ಪ್ರತಿದಿನ 10 ಆಟೊಗಳಿಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗಾಗಿ ಇಡೀ ದಿನ ಕಾಯಬೇಕಾಗಿದೆ ಎಂಬುದು ಆಟೊ ಚಾಲಕರ ಗೋಳು. ಎಲ್ಲೆಡೆ ನಗರ ಸಾರಿಗೆ ಬಸ್ ಉಚಿತವಾಗಿ ಸಂಚರಿಸುತ್ತಿವೆ. ಆಟೊಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿದೆ. ರಾತ್ರಿ ಒಂದೂವರೆಯಷ್ಟು ದರ ಪಡೆಯಬೇಕು ಎಂಬ ನಿಯಮವೇ ಇದೆ. ಆದರೂ ಜನ ವಿರೋಧಿಸುತ್ತಾರೆ ಎಂಬುದು ಅವರ ಚಿಂತೆ.