ಬೆಳಗಾವಿ ಸುವರ್ಣ ವಿಧಾನಸೌಧದ ಮುಂದಿನ ರಾಣಿ ಚನ್ನಮ್ಮನ ಪ್ರತಿಮೆಯ ಗೋಡೆಗೆ ಮಾಡಿದ ಅಲಂಕಾರ / ಪ್ರಜಾವಾಣಿ ಚಿತ್ರ
ಬೆಂಗಳೂರು ವಿಧಾನಸೌಧದ ಮಾದರಿಯಲ್ಲೇ ಸುವರ್ಣಸೌಧದ ಮುಂದೆ ಕೂಡ ಗಾಂಧೀಜಿ ಕುಳಿತ ಭಂಗಿಯ ಪ್ರತಿಮೆ ನಿರ್ಮಿಸಲಾಗುತ್ತಿದೆ. ಜನವರಿಗೆ ಇದು ಸಿದ್ಧಗೊಳ್ಳಲಿದೆ
-ಎಸ್.ಎಸ್.ಸೊಬರದ, ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲೂಡಿ
27 ಅಡಿ ಎತ್ತರದ ಗಾಂಧಿ ಪ್ರತಿಮೆ:
ಸುವರ್ಣ ಸೌಧಕ್ಕೆ ಮುಂದಿನ ವರ್ಷ ಮಹಾತ್ಮ ಗಾಂಧಿ ಕೂಡ ಬರಲಿದ್ದಾರೆ! ಹೌದು. ಸೌಧದ ಉತ್ತರ ದ್ವಾರದ ಮುಂದೆ ಗಾಂಧೀಜಿ ಅವರ 27 ಅಡಿ ಎತ್ತರದ ಬೃಹತ್ ಪ್ರತಿಮೆ ಪ್ರತಿಷ್ಠಾಪನೆ ಆಗಲಿದೆ. ಸದ್ಯಕ್ಕೆ ಚನ್ನಮ್ಮ ರಾಯಣ್ಣ ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗಳು ಮಾತ್ರ ಇವೆ. ಈ ಹಿಂದಿನ ಸರ್ಕಾರ ಸಮುದಾಯಗಳ ಮತ ಸೆಳೆಯುವ ಉದ್ದೇಶದಿಂದ ಈ ಪ್ರತಿಮೆಗಳನ್ನು ತರಾತುರಿಯಲ್ಲಿ ಪ್ರತಿಷ್ಠಾಪನೆ ಮಾಡಿತ್ತು. ಆದರೆ ರಾಷ್ಟ್ರಪಿತನ ಪ್ರತಿಮೆಯೇ ಇಲ್ಲ ಎಂಬ ದೂರುಗಳು ಪದೇಪದೇ ಕೇಳಿಬಂದಿದ್ದವು. ಇನ್ನು ಎರಡು ತಿಂಗಳಲ್ಲಿ ಗಾಂಧೀಜಿ ಪ್ರತಿಮೆಯೂ ವಿರಾಜಮಾನವಾಗಲಿದೆ ಎಂದು ಮೂಲಗಳು ತಿಳಿಸಿವೆ.