ಅಥಣಿ: ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಬೇಕೆಂದರೆ ಅದರೊಂದಿಗೆ ಉಪಕಸುಬನ್ನೂ ಮಾಡಬೇಕು. ಇದಕ್ಕೆ ತಕ್ಕ ಉದಾಹರಣೆ ಯುವ ರೈತ ಮಹಾದೇವ ಅರಟಾಳ. ತಮ್ಮ 9 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಜತೆಗೆ ಹೈನುಗಾರಿಕೆಯಲ್ಲೂ ಯಶಸ್ಸು ಕಂಡಿದ್ದಾರೆ.

ಮಹಾದೇವ ಕಲಿತಿದ್ದು ಪಿಯುಸಿ ಮಾತ್ರ. ನಂತರ ಕೃಷಿ ಕಾರ್ಯ ಶುರು ಮಾಡಿದ್ದಾರೆ. ಅವರ ಜಮೀನಿನಲ್ಲಿ ಕಬ್ಬು, ಬದನೆಕಾಯಿ, ಮೆಣಸಿನಕಾಯಿ ಸೇರಿದಂತೆ ಇನ್ನಿತರ ತರಕಾರಿ ಬೆಳೆಗಳನ್ನು ಬೆಳೆದ ಪ್ರತಿ ವರ್ಷ ಲಕ್ಷ ಲಕ್ಷ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಕಡಿಮೆ ಶ್ರಮದಿಂದ ಹೆಚ್ಚು ಇಳುವರಿ ಪಡೆದು ಹೆಚ್ಚು ಲಾಭ ಗಳಿಸಿದ್ದು ಅವರ ಹೆಗ್ಗಳಿಕೆ. ಜತೆಗೆ ಯಮ್ಮ ಜಮೀನು ರಾಸಾಯನಿಕಗಳಿಂದ ಹಾಳಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಕೆಲವರು ಸಾವಯವ ಕೃಷಿಯನ್ನು ತಮ್ಮ ಆಸಕ್ತಿಗೆ ಅಥವಾ ಹೇಳಿಕೊಳ್ಳಲು ಒಂದು ನೆಪದಂತೆ ಶುರು ಮಾಡುತ್ತಾರೆ. ಆದರೆ, ಮಹಾದೇವ ಅವರು ತಮ್ಮ ಎಲ್ಲ 9 ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಸುಮಾರು 600 ಟನ್ ಕಬ್ಬು ಬೆಳೆದು ಲಕ್ಷಾಂತರ ಆದಾಯ ಮಾಡುತ್ತಿದ್ದಾರೆ. ಕಬ್ಬು ಬೆಳೆಯಲ್ಲಿಯೇ ಈರುಳ್ಳಿ, ಮೆಣಿಸಿಕಾಯಿ ಬೆಳೆದು ₹1ಲಕ್ಷದಿಂದ ₹1.5 ಲಕ್ಷದಷ್ಟು ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಹೈನುಗಾರಿಕೆ: ಅಥಣಿ ಪಟ್ಟಣಕ್ಕೆ ಸಮೀಪದಲ್ಲೇ ಅವರ ಜಮೀನು ಇದೆ. ಹೀಗಾಗಿ, ಹೈನುಗಾರಿಕೆಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಅದನ್ನು ಸರಿಯಾಗಿ ಬಳಸಿಕೊಂಡ ಈ ರೈತ ಕೃಷಿಗಿಮತಲೂ ಹೆಚ್ಚು ಲಾಭ ಪಡೆಯುತ್ತುದ್ದಾರೆ.

ಸದ್ಯ ಅವರ ಬಳಿ 3 ಜರ್ಸಿ ಆಕಳು, 2 ಜವಾರಿ ಆಕಳು, 5 ಎಮ್ಮೆ ಇವೆ. ಸಾಕಣೆಯಿಂದ ನಿತ್ಯವೂ 50ರಿಂದ 55 ಲಿಟರ್‌ನಷ್ಟು ಹಾಲು ಮಾರಾಟ ಮಾಡುತ್ತಾರೆ. ದಿನವೂ ₹2,000 ದಿಂದ ₹2,200ದಷ್ಟು ಆದಾಯ ಪಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ.

ಇದರೊಂದಿಗೆ ಎಮ್ಮೆಗಳ ಹಾಗೂ ಜರ್ಸಿ ಆಕಳುಗಳ ಮೂತ್ರವನ್ನು ಹನಿ ನಿರಾವರಿ ಮೂಲಕ ಕಬ್ಬಿಗೆ ಗೊಬ್ಬರದಂತೆ ಪೂರೈಸುತ್ತಾರೆ. ಜವಾರಿ ಆಕಳುಗಳ ಮೂತ್ರದಿಂದ ಜಿವಾಮೃತ ತಯಾರಿಸಿ ಅದನ್ನು ಸಹ ಸಾವಯವ ಗೊಬ್ಬರದಂತೆ ಕಬ್ಬು ಬೆಳೆಗೆ ಉಪಯೋಗಿಸುತ್ತಾರೆ. ಇದರಿಂದ ಕಬ್ಬು ಬೆಳೆಗೆ ರಾಸಾಯನಿಕ ಗೊಬ್ಬರದಿಂದ ಮುಕ್ತಿ ನೀಡಿದ್ದಾರೆ.

ಮೇಕೆ ಸಾಕಣೆ: ಕೃಷಿ, ಹೈನುಗಾರಿಕೆಯೊಂದಿಗೆ ಮೇಕೆ ಸಾಕಾಣಿಕೆ ಮಾಡುವುದಕ್ಕೂ ಮಹಾದೇವ ಹಿಂದೆ ಬಿದ್ದಿಲ್ಲ. ಮಹಾದೇವ ಅರಟಾಳ, ಜಮನಾಪುರಿ ಅವರಂಥ ವಿಶೇಷ ತಳಿಯ ಮೇಕೆಗಳನ್ನು ಸಾಕಿರುವ ಅವರು, ವರ್ಷಕ್ಕೆ ಸುಮಾರು ₹1ಲಕ್ಷ ಆದಾಯ ಪಡೆಯುತ್ತಿದ್ದಾರೆ. ಈಗ ಅವರ ಬಳಿ ಕೇವಲ 10 ಜಮನಾಫುರಿ ಮೇಕೆಗಳಿವೆ. ಅಷ್ಟರಲ್ಲೇ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಕೃಷಿಯನ್ನಷ್ಟೇ ನಂಬಿಕೊಂಡರೆ ನಷ್ಟವಾಗಬಹುದು. ಅದರೊಂದಿಗೆ ಹೈನುಗಾರಿಕೆ ಮತ್ತು ಮೇಕೆ ಸಾಕಾಣಿಕೆ ಮತ್ತು ಮಿಶ್ರಬೇಸಾಯ ಪದ್ಧತಿ ಅನುಸರಿಸಿದರೆ ನಷ್ಟವಿಲ್ಲ

-ಮಹಾದೇವ ಅರಟಾಳ ರೈತ ಅಥಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.