ನೋಯಿಡಾ: ಪ್ರೊ ಕಬಡ್ಡಿ ಟೂರ್ನಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ತಂಡವು ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ತಮಿಳು ತಲೈವಾಸ್ ವಿರುದ್ಧ ಜಯಿಸಿತು.

ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯ ದಲ್ಲಿ ಹರಿಯಾಣ ತಂಡವು 36–29 ರಿಂದ ತಲೈವಾಸ್ ಎದುರು ಗೆದ್ದಿತು.

ಹರಿಯಾಣ ತಂಡದ ಮೊಹಮ್ಮದ್ ರೆಝಾ ಶಾದಲಾಯಿ ಅವರು ಏಳು ಅಂಕಗಳನ್ನು ಗಳಿಸಿದರು. ಮೊದಲಾರ್ಧದಲ್ಲಿ ತಲೈವಾಸ್ ತಂಡವು 17–14ರಿಂದ ಮುನ್ನಡೆ ಸಾಧಿಸಿತು. ಹರಿಯಾಣ ಡು ಆರ್ ಡೈನಲ್ಲಿ ವಿಫಲವಾಯಿತು. ಆದರೆ ಎರಡನೇ ಅವಧಿಯಲ್ಲಿ ಹರಿಯಾಣ ಪಾರಮ್ಯ ಮೆರೆಯಿತು. ಮುನ್ನಡೆ ಗಳಿಸಿ ಗೆಲುವಿನತ್ತ ಸಾಗಿತು.

ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 30–28ರಿಂದ ಪುಣೇರಿ ಪಲ್ಟನ್ಸ್ ವಿರುದ್ಧ ಜಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.