ಹುಕ್ಕೇರಿ: ಪಟ್ಟಣದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಲು ಹೋದ ಯುವಕನೊಬ್ಬ ಮೃತಪಟ್ಟಿದ್ದು, ವೈದ್ಯರ ಚಿಕಿತ್ಸೆಯೇ ಯುವಕನ ಸಾವಿಗೆ ಕಾರಣ ಎಂದು ಪಾಲಕರು ದೂರು ನೀಡಿದ್ದಾರೆ.

ಲಕ್ಷ್ಮಿಗಲ್ಲಿ ನಿವಾಸಿ ಮೋಸೀನ್ ಆದಮ್ ಕೋಲಾರ (25) ಮೃತ ವ್ಯಕ್ತಿ. ಪಟ್ಟಣದ ಗಾಂಧಿ ಬಡಾವಣೆಯಲ್ಲಿನ ‘ಲೈಫ್ ಲೈನ್’ ಆಸ್ಪತ್ರೆಯಲ್ಲಿ ಶುಕ್ರವಾರ ಚಿಕಿತ್ಸೆಗೆಂದು ಹೋದಾಗ ವೈದ್ಯ ಡಾ.ಅರ್ಷದ್ಅಯೂಬ್ ಮಹ್ಮದರಫಿಕ ಮಕಾನದಾರ ಅವರು ರೋಗಿಯನ್ನು ತಪಾಸಣೆ ಮಾಡಿ ಚುಚ್ಚುಮದ್ದು ನೀಡಿದ್ದರು. ಚಿಕಿತ್ಸೆ ನಂತರ ನಂತರ ರೋಗಿಗೆ ಗ್ಯಾಸ್ ಗ್ಯಾಂಗ್ರಿನ್ ಆಗಿ ಬೆಳಗಾವಿ ವೇಣುಗ್ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಯುವಕ ಮೃತಪಟ್ಟಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಅಭಿಜೀತ ಅಕ್ಕತಂಗೇರಹಾಳ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.