ಬೆಂಗಳೂರು: ಮಹಿಳೆಯರ ರಕ್ಷಣೆಗಾಗಿ ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿದ ಉತ್ತರ ವಿಭಾಗದ ಪೊಲೀಸರು, 100ಕ್ಕೂ ಹೆಚ್ಚು ಪುಡಾರಿಗಳನ್ನು ವಶಕ್ಕೆ ಪಡೆದರು.

ಮೆಟ್ರೊ, ಬಸ್, ಆಟೊ ನಿಲ್ದಾಣ, ತಂಗುದಾಣ ಸಹಿತ ಸಾರ್ವಜನಿಕ ಸ್ಥಳಗ ಳಲ್ಲಿ ಪುಡಾರಿಗಳ ಕಾಟ ಹೆಚ್ಚಾಗಿದೆ. ಪುಡಾರಿಗಳ ಉಪಟಳಕ್ಕೆ ಕಡಿವಾಣ ಹಾಕಲು ಡಿಸಿಪಿ ಶಶಿಕುಮಾರ್ ಅವರಿಗೆ ಸಾರ್ವಜನಿಕರು ದೂರು ನೀಡಿದ್ದರು.

ದೂರಿನ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಡಿಸಿಪಿ ನೇತೃ ತ್ವದ ತಂಡ, ರಾತ್ರೋರಾತ್ರಿ ಪುಡಾರಿಗಳ ಹೆಡೆಮುರಿ ಕಟ್ಟಿ‘ರಸ್ತೆಯಲ್ಲಿ ನಿಂತು ಯುವತಿಯರನ್ನು ಚುಡಾಯಿಸುತ್ತಿದ್ದ, ವಾಹನಗಳನ್ನು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಹಾಗೂ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಪುಡಾರಿಗಳ ಬಗ್ಗೆ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿ 100ಕ್ಕೂ ಹೆಚ್ಚು ಪುಡಾರಿಗಳನ್ನು ವಶಕ್ಕೆ ಪಡೆಯಲಾಯಿತು’ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಪುಡಾರಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಅವರಲ್ಲಿ ಕೆಲವರು ರೌಡಿಗಳೂ ಇದ್ದಾರೆ. ಪೋಷಕ ರನ್ನು ಕರೆಸಿ ಬುದ್ದಿಹೇಳಿ, ಇನ್ನೊಮ್ಮೆ ಕೃತ್ಯ ಎಸಗದಂತೆ ಬರೆಸಿಕೊಂಡು ಕೆಲ ಯುವಕರನ್ನು ಬಿಟ್ಟು ಕಳುಹಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.