ಬೆಂಗಳೂರು: ತಲುಪಬೇಕಿದ್ದ ನಗರಗಳಲ್ಲಿನ ಪ್ರತಿಕೂಲ ಹವಾಮಾನದ ಕಾರಣದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಸೋಮವಾರ 20 ವಿಮಾನಗಳು ನಿಗದಿತ ಸಮಯಕ್ಕಿಂತ ತಡವಾಗಿ ಹಾರಾಟ ಆರಂಭಿಸಿದವು.

‘ಬೆಂಗಳೂರಿನಲ್ಲಿ ಹವಾಮಾನದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ, ಕೋಲ್ಕತ್ತಾ, ಚೆನ್ನೈ, ಅಲಹಾಬಾದ್ ಮತ್ತು ಹುಬ್ಬಳ್ಳಿಯಲ್ಲಿ ಪ್ರತಿಕೂಲ ಹವಾಮಾನ ಇದ್ದ ಕಾರಣದಿಂದ ಕೆಐಎಯಿಂದ ಈ ವಿಮಾನಗಳು ಹಾರಾಟ ಆರಂಭಿಸುವುದು ತಡವಾಯಿತು’ ಎಂದು ಕೆಐಎ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರರು ‘ಪ್ರಜಾವಾಣಿ’ಗೆ ತಿಳಿಸಿದರು.

ಚೆನ್ನೈನಲ್ಲಿ ಇಳಿಯಬೇಕಿದ್ದ ಆರು ವಿಮಾನಗಳನ್ನು ಮಾರ್ಗ ಬದಲಿಸಿ ಕೆಐಎನಲ್ಲಿ ಇಳಿಸಲಾಗಿತ್ತು. ದೀರ್ಘ ಸಮಯದ ಬಳಿಕ ಆ ವಿಮಾನಗಳು ಪುನಃ ಚೆನ್ನೈನತ್ತ ತೆರಳಿದವು. ಅವುಗಳಲ್ಲಿ ಬಹುತೇಕ ವಿಮಾನಗಳು ಇಂಡಿಗೋ ಕಂಪನಿಗೆ ಸೇರಿದ್ದವು ಎಂದು ಅವರು ಮಾಹಿತಿ ನೀಡಿದರು.

ಭಾನುವಾರ ಕೆಐಎನಿಂದ ಹೊರಡಬೇಕಿದ್ದ 50 ವಿಮಾನಗಳ ಹಾರಾಟ ವಿಳಂಬವಾಗಿತ್ತು. ಏಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.