ಬೆಂಗಳೂರು: ರಾಜ್ಯದ ಹಲವು ಕಾರಾಗೃಹಗಳಿಗೆ ನಕಲಿ ಕಂಪನಿಯ ಹೆಸರಿನಲ್ಲಿ ಕಂಪ್ಯೂಟರ್‌ಗಳನ್ನು ಪೂರೈಕೆ ಮಾಡಿ ಸರ್ಕಾರಕ್ಕೆ ವಂಚಿಸಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಎಸ್ಪಿ ಪ್ರದೀಪ್ ಗುಂಟಿ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ವಾಗ್ಮಿನಾ ಎಂಟರ್‌ಪ್ರೈಸಸ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ರಾಜ್ಯದ ಹಲವು ಕಾರಾಗೃಹಗಳಿಗೆ ಕಂಪ್ಯೂಟರ್ ಹಾಗೂ ಇತರೆ ಉಪಕರಣಗಳ ಅಗತ್ಯವಿತ್ತು. ಅವುಗಳನ್ನು ಖರೀದಿಸಲು 2022ರಲ್ಲಿ ಟೆಂಡರ್ ಕರೆಯಲಾಗಿತ್ತು. ಕಡಿಮೆ ದರ ಪಟ್ಟಿ ನೀಡಿದ್ದ ವಾಗ್ಮಿನಾ ಎಂಟರ್‌ಪ್ರೈಸಸ್ ಕಂಪನಿಗೆ 125 ಕಂಪ್ಯೂಟರ್ ಪೂರೈಸಲು ಗುತ್ತಿಗೆ ನೀಡಲಾಗಿತ್ತು. ಅದಕ್ಕಾಗಿ ₹ 92.81 ಲಕ್ಷವನ್ನು ಪಾವತಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.

‘ಎಚ್‌ಎಲ್‌ಬಿಎಸ್ ಕಂಪನಿಯದ್ದು ಎನ್ನಲಾದ 125 ಕಂಪ್ಯೂಟರ್‌ಗಳನ್ನು ರಾಜ್ಯದ 37 ಕಾರಾಗೃಹಗಳಿಗೆ ಪೂರೈಸಲಾಗಿತ್ತು. ಇತ್ತೀಚೆಗೆ ಲೆಕ್ಕ ತಪಾಸಣೆ ನಡೆಸುವಾಗ 43 ಕಂಪ್ಯೂಟರ್‌ಗಳು ಎಚ್‌ಎಲ್‌ಬಿಎಸ್ ಕಂಪನಿಗೆ ಸೇರಿದ್ದಲ್ಲವೆಂಬುದು ಗೊತ್ತಾಗಿದೆ. ನಕಲಿ ಕಂಪನಿಯ ಕಂಪ್ಯೂಟರ್‌ಗಳನ್ನು ವಾಗ್ಮಿನಾ ಎಂಟರ್
ಪ್ರೈಸಸ್‌ನವರು ಪೂರೈಕೆ ಮಾಡಿರುವುದು ಪತ್ತೆಯಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

7 ಕಂಪ್ಯೂಟರ್ ನಿಷ್ಕ್ರಿಯ: ‘43 ನಕಲಿ ಕಂಪನಿಯ ಕಂಪ್ಯೂಟರ್‌ಗಳ ಪೈಕಿ 7 ಕಂಪ್ಯೂಟರ್‌ಗಳು ಸಂಪೂರ್ಣ ನಿಷ್ಕ್ರಿಯವಾಗಿವೆ. ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಎಸ್ಪಿಯವರು ದೂರಿದ್ದಾರೆ’ ಎಂದು ಪೊಲೀಸ್ ಮೂಲಗಳು
ಹೇಳಿವೆ.

‘ನಕಲಿ ಕಂಪನಿಯ ಕಂಪ್ಯೂಟರ್‌ಗಳನ್ನು ಪೂರೈಕೆ ಮಾಡಿ ಸರ್ಕಾರವನ್ನು ವಂಚಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ವಾಗ್ಮಿನಾ ಎಂಟರ್‌ಪ್ರೈಸಸ್ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.