ಬೆಂಗಳೂರು: ‘ಸಾಧನೆ ಮಾಡಲು ಎಲ್ಲಾ ಅಂಗಾಂಗಗಳು ಸರಿ ಇರಬೇಕೆಂದೇನಿಲ್ಲ, ದೃಢವಾದ ಮನಸ್ಸಿರಬೇಕು’ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ ಬುಧವಾರ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಬ್ರೈಲ್ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮನಸ್ಸು ಮಾಡಿದರೆ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು. ಮನಸ್ಸಿನ ಶಕ್ತಿಯ ಮುಂದೆ ನಮ್ಮ ಅಂಗಾಂಗಗಳ ನ್ಯೂನತೆ ಏನೂ ಅಲ್ಲ. ದೇವರು ನಮ್ಮನ್ನು ಸೃಷ್ಟಿ ಮಾಡುವಾಗ ಎಲ್ಲಾ ಅಂಗಾಂಗಳಿಗೂ ಶಕ್ತಿ ನೀಡಿರುತ್ತಾನೆ. ಕೆಲವೂಮ್ಮೆ ಆ ಶಕ್ತಿ ಕೆಲವು ಅಂಗಾಂಗಗಳಿಗೆ ಇಲ್ಲದಂತೆ ಆಗಬಹುದು. ಆದರೆ, ಅದರಲ್ಲಿರುವ ಶಕ್ತಿ ಮತ್ತೊಂದು ಅಂಗಾಂಗಕ್ಕೆ ವರ್ಗಾವಣೆ ಮಾಡಿರುತ್ತಾನೆ. ಅದನ್ನು ಬಳಸಿಕೊಂಡು ಸಾಧಿಸಿದವರು ಇಂದು ನಮ್ಮೊಂದಿಗಿದ್ದಾರೆ. ಅವರನ್ನು ನೋಡಿದರೆ ಸಂತಸವಾಗುತ್ತದೆ’ ಎಂದರು.

ಅಂಧ ಐಎಎಸ್ ಅಧಿಕಾರಿ ಮತ್ತು ಪುದಿಚೇರಿಯಲ್ಲಿ ಜಿಲ್ಲಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿರುವ ಸತೇಂದರ್ ಸಿಂಗ್ ಅವರಿಗೆ ‘ಸಾರ್ವಜನಿಕ ಸನ್ಮಾನ ಸಮರ್ಪಣೆ’ ಪ್ರಶಸ್ತಿ, ಜೈನ್ ರೋಲ್ ಮಾಡೆಲ್ ಉದ್ಯೋಗಿ ಸಂಜಯ್ ಶ್ರೀಕಾಂತ್, ಸ್ವಯಂ ಉದ್ಯೋಗಿ ಕಮಲ್ ಮಾಲು, ಕ್ರೀಡಾಪಟು ಮಾನಸಾ, ಸಮಾಜ ಸೇವಕ ನಾಗನಗೌಡ ಅವರಿಗೆ ‘ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್ (ಎನ್.ಎಫ್.ಬಿ.) ಎಕ್ಸಲೆನ್ಸಿ’ ಪ್ರಶಸ್ತಿ, ಅಂಕಿತ್ ಜಿಂದಾಲ್, ಬಿ.ಎಸ್. ವೆಂಕಟೇಶ್, ಪ್ರಜ್ವಲ್ ಹಾಗೂ ಪೃಥ್ವಿ ಅವರಿಗೆ ‘ಎನ್.ಎಫ್.ಬಿ. ಡಿಗ್ನಿಟಿ ಆಫ್ ದಿ ಕಮ್ಯೂನಿಟಿ’ ಪ್ರಶಸ್ತಿ, ಗಟಕ್ ಸಿಂಗ್ ಮತ್ತು ಸದಾಶಿವಯ್ಯ ಅವರಿಗೆ ‘ಶ್ರೇಷ್ಠ ಮಾನವ ಸೇವಾ’ ಸನ್ಮಾನ, ವೀರಭದ್ರಯ್ಯ ಅವರಿಗೆ ‘ಹಿರಿಯ ನಾಗರಿಕ ಸನ್ಮಾನ’ ಮತ್ತು ಲಕ್ಷ್ಮೀ ದೇವಿ ಅವರಿಗೆ ಸ್ವಯಂ ಸಬಲ ಮಹಿಳಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.