ಸಾಧನವು ನೈಜ ಸಮಯದಲ್ಲಿ ಬೋರ್ಡ್ ಮೇಲಿನ ದತ್ತಾಂಶವನ್ನು ಸೆರೆಹಿಡಿದು ರವಾನಿಸುತ್ತದೆ. ಬೆರಳಿನ ಮೇಲೆ ಬರೆದ ಅಕ್ಷರಗಳು ಹಾಗೂ ರೇಖೆಗಳ ಸಂವೇದನೆ ಒದಗಿಸಲು ‘ಹ್ಯಾಪ್ಟಿಕ್ ತಂತ್ರಜ್ಞಾನ’ ನೆರವಾಗಲಿದೆ. ಬೋರ್ಡ್ ಮೇಲೆ ಬರೆದ ಪಠ್ಯವು ಬ್ರೈಲ್ ಲಿಪಿಯಾಗಿ ಪರಿವರ್ತನೆಯಾಗಲಿದೆ. ಸ್ಪರ್ಶಾನುಭವದಿಂದ ಪಠ್ಯವನ್ನು ಅರ್ಥೈಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳ ತಂಡವು ಈ ಸಾಧನವನ್ನು ಉತ್ಪಾದಿಸಿ ವಿತರಿಸಲು ಪಾಲುದಾರರ ಹುಡುಕಾಟದಲ್ಲಿದೆ. ‘ಈ ಸಾಧನವು ಮಿದುಳಿನಂತೆ ಕಾರ್ಯನಿರ್ವಹಿಸಲಿದೆ. ಸಂಸ್ಥೆಯ ಪ್ರಾಧ್ಯಾಪಕ ಮಾಧವ್ ಅವರು ಈ ಸಾಧನದ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿದರು. ಇತರ ಬ್ರೈಲ್ ಸಾಧನಗಳಿಗೆ ಹೋಲಿಸಿದರೆ ಇದರ ತಯಾರಿಕಾ ವೆಚ್ಚವು ಕಡಿಮೆಯಿದೆ. ಬ್ರೈಲ್ ಚುಕ್ಕೆಗಳ ವಿನ್ಯಾಸ ಮತ್ತು ಸಾಧನವನ್ನು ಜೋಡಿಸುವುದು ಸವಾಲಾಗಿತ್ತು. ಚುಕ್ಕೆಗಳ ನಡುವೆ ಒಂದು ಮಿಲಿ ಮೀಟರ್ ವ್ಯತ್ಯಾಸವಾದರೂ ಮೋಟಾರ್‌ಗೆ ಹೊಂದಾಣಿಕೆ ಆಗುವುದಿಲ್ಲ’ ಎಂದು ಮಯಾಂಕ್ ಕಾಬ್ರಾ ವಿವರಿಸಿದರು.