ಬೆಂಗಳೂರು: ‘ಸಾಯಿಸ್ತಾರೆ ನನ್ನ. ದಯವಿಟ್ಟು ನ್ಯಾಯ ಕೊಡ್ಸಿ’ ಎಂದು ರಾಜರಾಜೇಶ್ವರಿನಗರ ಠಾಣೆ ಪೊಲೀಸರ ವಿರುದ್ಧ ನಂದೀಶ್ ಕೊಡಗು ಎಂಬುವವರು ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ದಂಪತಿಯನ್ನು ಅಡ್ಡಗಟ್ಟಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ₹ 1 ಸಾವಿರ ಸುಲಿಗೆ ಮಾಡಿದ್ದ ಆರೋಪದ ಬೆನ್ನಲ್ಲೇ ಮತ್ತೊಂದು ಆರೋಪ ಕೇಳಿಬಂದಿದೆ.

ಆರೋಪ ಅಲ್ಲಗೆಳೆದಿರುವ ಪೊಲೀಸರು, ‘ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ. ನಂದೀಶ್ಗೆ ಕಿರುಕುಳ ನೀಡಿಲ್ಲ’ ಎಂದಿದ್ದಾರೆ.

‘ಯುವತಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ಪ್ರಕರಣದಲ್ಲಿ ನಂದೀಶ್ ಬಂಧನವಾಗಿತ್ತು. ಕೆಲ ದಿನ ಜೈಲಿನಲ್ಲಿದ್ದ ಈತ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಇದೀಗ ಆರೋಪ ಮಾಡುತ್ತಿದ್ದಾನೆ’ ಎಂದೂ ಪೊಲೀಸರು ಹೇಳಿದ್ದಾರೆ.

ಪೋಸ್ಟ್ನಲ್ಲಿ ಏನಿದೆ: ‘ನನ್ನ ಮೊಬೈಲ್ ಅಕ್ರಮವಾಗಿ ಇಟ್ಟುಕೊಂಡಿರುವ (ರಾಜರಾಜೇಶ್ವರಿನಗರದಲ್ಲಿ ಈ ಹಿಂದೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖ ಲಿಸಿ ದಂಡಿಸಿದ್ದ ಪೊಲೀಸ್) ನವೀನ್ ಹಾಗೂ ಯದುಕುಮಾರ್ ನನ್ನ ಸಾವಿಗೆ ಕಾರಣ’ ಎಂದು ಪೋಸ್ಟ್ನಲ್ಲಿ ನಂದೀಶ್ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.