ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಕೆಎಸ್ಆರ್ಟಿಸಿಯ ನಾಲ್ವರು ನೌಕರರ ಅವಲಂಬಿತರಿಗೆ ತಲಾ ₹1 ಕೋಟಿ ವಿಮೆಯನ್ನು ಬುಧವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ವಿತರಿಸಿದರು.

‘ಕಾರ್ಮಿಕರ ಕಲ್ಯಾಣಕ್ಕಾಗಿ ಹಾಗೂ ಪ್ರಯಾಣಿಕರಿಗಾಗಿ ಕೆಎಸ್ಆರ್ಟಿಸಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಮೃತಪಟ್ಟವರ ಜೀವ ಅಮೂಲ್ಯವಾದದ್ದು. ಅದನ್ನು ಮರಳಿ ತರಲಾಗುವುದಿಲ್ಲ. ಆದರೆ, ಅವರ ಕುಟುಂಬದ ಆರ್ಥಿಕ ಸ್ವಾವಲಂಬನೆಗಾಗಿ ನಿಗಮವು ರೂಪಿಸಿರುವ ₹1 ಕೋಟಿ ಯೋಜನೆ ದೂರದೃಷ್ಟಿಯನ್ನು ಹೊಂದಿದೆ. ಇಲ್ಲಿಯವರೆಗೆ ಅಪಘಾತದಲ್ಲಿ ಮೃತಪಟ್ಟ 17 ಮಂದಿಯ ಕುಟುಂಬಕ್ಕೆ ಈ ವಿಮೆ ತಲುಪಿದೆ’ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

ನಿಗಮದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಶ್ರಮಜೀವಿಗಳು. ಅವರಿಗೆ ಸಲ್ಲಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು. ಇಂದು ಪರಿಹಾರ ಮೊತ್ತವನ್ನು ಪಡೆದವರು ಅದನ್ನು ಸಮರ್ಪಕವಾಗಿ ಬಳಕೆ ಮಾಡಿ ಕುಟುಂಬವನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು ಎಂದು ಎಸ್.ಆರ್. ಶ್ರೀನಿವಾಸ್ ಸಲಹೆ ನೀಡಿದರು.

ಅಪಘಾತ ಹೊರತುಪಡಿಸಿ ಅನಾರೋಗ್ಯದಿಂದ ಮೃತಪಟ್ಟ 23 ಸಿಬ್ಬಂದಿಯ ಕುಟುಂಬಕ್ಕೆ ತಲಾ ₹10 ಲಕ್ಷ ವಿತರಿಸಲಾಯಿತು. ಈ ಯೋಜನೆ ಜಾರಿಯಾದ ಮೇಲೆ ಒಟ್ಟು 39 ನೌಕರರಿಗೆ ಈ ವಿಮೆ ಪರಿಹಾರ ನೀಡಲಾಗಿದೆ. ನಿಗಮದ ಬಸ್ಗಳು ಅಪಘಾತಕ್ಕೀಡಾಗಿ ಮೃತಪಟ್ಟ ನಾಲ್ವರು ಪ್ರಯಾಣಿಕರ ಕುಟುಂಬಕ್ಕೆ ಅಪಘಾತ ಪರಿಹಾರ ವಿಮೆ ತಲಾ ₹10 ಲಕ್ಷ ನೀಡಲಾಯಿತು.

ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ಕಾರ್ಮಿಕ ಸಂಘಟನೆಗಳ ಮುಖಂಡರಾದ ಅನಂತಸುಬ್ಬರಾವ್, ವಿಜಯಭಾಸ್ಕರ್, ರೇವಪ್ಪ, ಮಂಜುನಾಥ್, ಚಂದ್ರಶೇಖರ್, ನಾಗರಾಜು, ವೆಂಕಟರಮಣಪ್ಪ, ಜಯರಾಜ ಅರಸು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.