ಬೆಂಗಳೂರು: ‘ಅಶ್ಲೀಲ ವಿಡಿಯೊದ ಸಿ.ಡಿ ಬಿಡುಗಡೆ ಮಾಡುತ್ತೇನೆ’ ಎಂಬುದಾಗಿ ಬೆದರಿಸಿ ನಟ ಸುದೀಪ್ ಅವರಿಗೆ ಅನಾಮಧೇಯ ಪತ್ರ ಕಳುಹಿಸಿದ್ದ ಆರೋಪಿ ರಮೇಶ್ ಕಿಟ್ಟಿ ವಿಚಾರಣೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ.

ಜೆ.ಪಿ. ನಗರದಲ್ಲಿರುವ ಸುದೀಪ್ ನಿವಾಸಕ್ಕೆ ಅಂಚೆ ಮೂಲಕ ಎರಡು ಪತ್ರಗಳು ಬಂದಿದ್ದವು. ಸುದೀಪ್ ಆಪ್ತರಾದ ನಿರ್ಮಾಪಕ ಜಾಕ್ ಮಂಜು ಅವರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು. ಅದರನ್ವಯ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಸಿಬಿ ಪೊಲೀಸರು, ಅಂಚೆ ಕಚೇರಿ ಸುಳಿವು ಆಧರಿಸಿ ರಮೇಶ್ ಅವರನ್ನು ವಶಕ್ಕೆ ಪಡೆದಿದೆ.

‘ನಿರ್ದೇಶಕನಾಗಿದ್ದ ರಮೇಶ್ ಕಿಟ್ಟಿ, ಸುದೀಪ್ ಜೊತೆ ಉತ್ತಮ ಒಡನಾಟ ಹೊಂದಿದ್ದರು. ‘ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್’ ಅಧ್ಯಕ್ಷರಾಗಿದ್ದರು. ₹ 2 ಕೋಟಿ ವಿಚಾರಕ್ಕೆ ಗಲಾಟೆ ಆಗಿ, ಟ್ರಸ್ಟ್ನಿಂದ ಹೊರಬಂದಿದ್ದರು. ಅದೇ ಹಣದ ವಿಚಾರದಲ್ಲಿ ಸಿಟ್ಟಾಗಿ, ಅಶ್ಲೀಲ ವಿಡಿಯೊ ಇರುವುದಾಗಿ ಪತ್ರ ಬರೆದಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಹಣಕಾಸು ವಿಚಾರ ಹಾಗೂ ವಿಡಿಯೊ ಎರಡರ ಬಗ್ಗೆಯೂ ರಮೇಶ್ ಅವರಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಬೆದರಿಕೆ ಪ್ರಕರಣವೂ ಜಾಮೀನು ಸಹಿತವಾಗಿದೆ. ಹೀಗಾಗಿ, ನೋಟಿಸ್ ನೀಡಿ ವಿಚಾರಣೆಗೆ ಕರೆಸಿ ವಶಕ್ಕೆ ಪಡೆಯಲಾಗಿದೆ. ಬಂಧನ ಪ್ರಕ್ರಿಯೆ ಬಗ್ಗೆ ಸದ್ಯ ತೀರ್ಮಾನ ಮಾಡಿಲ್ಲ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.