ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನದಲ್ಲಿ ಸ್ವೀಡನ್ನ ಗ್ರಿಪೆನ್ ಏರ್ಕ್ರಾಫ್ಟ್ನ ಕಾಕ್ಪಿಟ್ ಸಿಮ್ಯುಲೇಟರ್ನಲ್ಲಿ ನಡೆಸಲಾದ ಸ್ಪರ್ಧೆಯಲ್ಲಿ ನಗರದ ವಿದ್ಯಾರ್ಥಿ ಪೈಲಟ್ ಅಭಯ್ ಅಶ್ವಿನ್ ‘ಗ್ರಿಪೆನ್ ವಾರಿಯರ್’ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಸ್ವೀಡನ್ನ ಗ್ರಿಪೆನ್ ಯುದ್ಧ ವಿಮಾನಗಳ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಪಡೆದಿದ್ದಾರೆ.

ಆನ್ಲೈನ್ ಸ್ಪರ್ಧೆಯಲ್ಲೂ ಅಭಯ್ ವಿಜೇತರಾಗಿದ್ದರು. ಈ ಸ್ಪರ್ಧೆಯಲ್ಲಿ 27 ರಾಜ್ಯಗಳಿಂದ 2 ಸಾವಿರ ಮಂದಿ ಭಾಗ
ವಹಿಸಿದ್ದರು. ಸ್ಪರ್ಧೆಯ ಅಂತಿಮ ತೀರ್ಪುಗಾರರಾಗಿ ಸಾಬ್ ಸಂಸ್ಥೆಯ ಮುಖ್ಯ ಪರೀಕ್ಷಾ ಪೈಲಟ್ಗಳಾದ ಹಾನ್ಸ್ ಐನೆರ್ಥ್ ಮತ್ತು ಮಾರ್ಟಿನ್ ಹ್ಯಾಂಬ್ರಿಯೂಸ್ ಇದ್ದರು. ಏರ್ ಕಾಂಬ್ಯಾಟ್ ಇಮ್ಯುಲೇಟರ್ ಮಟ್ಟದ ಸವಾಲನ್ನು ಎದುರಿಸಿ ವಿಜೇತರಾಗಿರುವ ಅವರು, ನಗರದ ಹಾರಾಟ ತರಬೇತಿ ಶಾಲೆಯ ವಿದ್ಯಾರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.