ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನದ ಕೊನೆಯ ದಿನವಾದ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲು ಜನರು, ಯಲಹಂಕ ವಾಯುನೆಲೆಯತ್ತ ಬರುತ್ತಿದ್ದಾರೆ. ಬಳ್ಳಾರಿ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದ್ದು, ವಿಪರೀತ ದಟ್ಟಣೆ ಉಂಟಾಗಿದೆ.

ಎಸ್ಟಿಮ್ ಮಾಲ್‌ನಿಂದಲೇ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿದೆ. ಯಲಹಂಕ ವಾಯುನೆಲೆ ಎದುರಿನ ಪ್ರಮುಖ ರಸ್ತೆಯಲ್ಲಿ ವಾಹನಗಳು ನಿಂತಲೇ ನಿಂತಿವೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ದೇವನಹಳ್ಳಿಯತ್ತ ಹೊರಟಿರುವ ಜನ, ದಟ್ಟಣೆಯಲ್ಲಿ ಸಿಲುಕಿದ್ದಾರೆ.
ಪ್ರಮುಖ ರಸ್ತೆಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿವೆ.

ಬಿಎಂಟಿಸಿ ಬಸ್, ಕಾರು, ಬೈಕ್ ಹಾಗೂ ಇತರೆ ವಾಹನಗಳು ದಟ್ಟಣೆಯಲ್ಲಿ ನಿಂತಿವೆ. ಬಸ್‌ನ ಹಲು ಪ್ರಯಾಣಿಕರು ಮಾರ್ಗಮಧ್ಯೆಯೇ ಇಳಿದು ನಡೆದುಕೊಂಡು ವಾಯುನೆಲೆಯತ್ತ ಹೊರಟಿದ್ದಾರೆ.

ವಾಯು ಪ್ರದರ್ಶನ ವೀಕ್ಷಿಸಲು ಇಂದು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಯುನೆಲೆಗೆ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.