ಯಲಹಂಕ: ಬಿಬಿಎಂಪಿ ಹಾಗೂ ಯಲಹಂಕ ಯುನೈಟೆಡ್ ಎನ್ವಿರಾನ್ಮೆಂಟ್ ಅಸೋಸಿಯೇಷನ್ (ಯುವ) ಆಶ್ರಯದಲ್ಲಿ ಮಾರ್ಚ್ 12ರಂದು ‘ಅಲ್ಲಾಳಸಂದ್ರ ಕೆರೆಹಬ್ಬ’ದ ಅಂಗವಾಗಿ ಇಡೀ ದಿನ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ಎಸ್. ಆರ್.ವಿಶ್ವನಾಥ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಿಗ್ಗೆ 7ಕ್ಕೆ ಸಾಮೂಹಿಕ ಯೋಗಾಸನ ನಡೆಯಲಿದೆ. ಸೈಕಲ್ ಜಾಥಾ, ಗಾಳಿಪಟ ಪ್ರದ ರ್ಶನ, ಮ್ಯಾಜಿಕ್ ಷೋ, ಮಹಿಳಾ ಡೊಳ್ಳು ಕುಣಿತ, ಕೀಲುಕುದುರೆ ಕುಣಿತ, ಹುಲಿವೇಷ ಗಮನ ಸೆಳೆಯಲಿವೆ’ ಎಂದರು.

ಪರಿಸರ ಇಲಾಖೆಯಿಂದ ಪರಿಸರ ಮತ್ತು ಮಾಲಿನ್ಯ ಕುರಿತು ಅರಿವು, ಅರಣ್ಯ ಇಲಾಖೆಯಿಂದ ಉಚಿತವಾಗಿ ಗಿಡ ವಿತರಣೆ, ‘ಅಂತರ್ಜಲ ಅಭಿವೃದ್ಧಿ’ ಮತ್ತು ಸಮುದಾಯದ ಪಾತ್ರ, ಕೆರೆ ಗಳ ಇತಿಹಾಸ ಮತ್ತು ಪರಂಪರೆ ಕುರಿತು ತಜ್ಞರಿಂದ ಉಪನ್ಯಾಸ, ಉಚಿತ ಆರೋಗ್ಯ ಮತ್ತು ದಂತ ತಪಾಸಣೆ ಶಿಬಿರ ನಡೆಯಲಿವೆ ಎಂದು ಮಾಹಿತಿ ನಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.