ಬೆಂಗಳೂರು: ‘ಹರೌನ್ ಅಲಿ ಎಂಬ ಈಜಿಪ್ಟ್ ಮಹಿಳೆಗೆ ಕ್ಯಾನ್ಸರ್ ಇದೆ ಎಂದುಅಪೋಲೊ ಆಸ್ಪತ್ರೆ ವೈದ್ಯರು ಸುಳ್ಳು ಹೇಳಿ ಅವರ ಜೀವವನ್ನೇ ಅಪಾಯಕ್ಕೆ ಸಿಲುಕಿಸಿದ್ದಾರೆ’ ಎಂದು ಈಜಿಪ್ಟ್ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಮೇರಿ ಇಬ್ರಾಹಿಂ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬನ್ನೇರುಘಟ್ಟದಅಪೋಲೊ ಆಸ್ಪತ್ರೆ ವೈದ್ಯ ವಾಲಿದ್ ಅಲ್ಬಕಲಿ ಈಜಿಪ್ಟ್‌ನಲ್ಲಿ ಹರೌನ್ ಅಲಿ ಅವರಿಗೆ ಪರಿಚಯವಾಗಿ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಅದರಂತೆ ಶೇಷಾದ್ರಿಪುರದಅಪೋಲೊ ಆಸ್ಪತ್ರೆಯಲ್ಲಿ ಕಳೆದ ಜೂನ್‌ನಲ್ಲಿ ಅಂತರರಾಷ್ಟ್ರೀಯ ರೋಗಿಗಳ ಸೇವಾ ಸಂಯೋಜಕಿಯ ಕೆಲಸ ಕೊಡಿಸಿದ್ದರು.’

‘ಈ ನಡುವೆಅನಾರೋಗ್ಯಕ್ಕೆ ಈಡಾದ ಹರೌನ್, ಚಿಕಿತ್ಸೆ ಪಡೆಯಲು ಅದೇ ಆಸ್ಪತ್ರೆಗೆ ದಾಖಲಾದರು. ವಿವಿಧ ತಪಾಸಣೆಗಳ ಬಳಿಕ ಅವರಿಗೆಕ್ಯಾನ್ಸರ್ ಇದೆ ಎಂದು ಹೇಳಿದ ವೈದ್ಯರು, ಅಂಗಾಂಗವನ್ನು ತೆಗೆದಿದ್ದಾರೆ’ ಎಂದು ಆರೋಪಿಸಿದರು.

ಸಾಮಾಜಿಕ ಹೋರಾಟಗಾರ ಎನ್. ಅನಂತನಾಯಕ್ ಮಾತನಾಡಿ,‘ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಹಾಗೂ ಮುಂಬೈನ ಎಸ್.ಆರ್.ಎಲ್ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿದ್ದು, ಆಕೆಗೆ ಕ್ಯಾನ್ಸರ್ ಇಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ’ ಎಂದರು.

‘ನಿರ್ಲಕ್ಷ್ಯ ಮಾಡಿಲ್ಲ’: ‘ವೈದ್ಯರು ನಿರ್ಲಕ್ಷ್ಯ ತೋರಿಲ್ಲ. ಎಲ್ಲಾ ಹಂತಗಳಲ್ಲೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ನಮ್ಮ ಮೇಲೆ ಮಾಡಿರುವ ಆರೋಪ ನೋವು ತಂದಿದೆ’ ಎಂದು ಅಪೋಲೊ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.