ಬೆಂಗಳೂರು: ಕೃತಕ ಬುದ್ಧಿಮತ್ತೆಯ (ಎಐ) ಸುದ್ದಿ ವಾಚಕಿ ಕನ್ನಡದಲ್ಲಿಯೂ ಸುದ್ದಿ ವಾಚಿಸಿದ್ದಾಳೆ. ಸುದ್ದಿವಾಹಿನಿ ನ್ಯೂಸ್ಫಸ್ಟ್ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.

ಎಐ ಮಾಯಾ ಹೆಸರಿನ ಸುದ್ದಿ ವಾಚಕಿ ಸಾಮಾನ್ಯ ಸುದ್ದಿ ವಾಚಕರ ರೀತಿಯೇ ಎಲ್ಲವನ್ನೂ ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದ್ದಾಳೆ. ಸಂದರ್ಶನ, ಚರ್ಚೆ, ವಿಶೇಷ ವರದಿ ಸಹಿತ ಸುದ್ದಿ ಮಾಧ್ಯಮಗಳ ಯಾವುದೇ ಪ್ರಕಾರದ ನಿರೂಪಣೆಯನ್ನು ಮಾಡುವ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆಯ ಮಾಯಾ ಹೊಂದಿದ್ದಾಳೆ. ದಕ್ಷಿಣ ಭಾರತದಲ್ಲಿ ಈ ತಂತ್ರಜ್ಞಾನ ಬಳಸಿಕೊಂಡ ಮೊದಲ ಸುದ್ದಿವಾಹಿನಿ ಎಂಬ ಹೆಗ್ಗಳಿಕೆಗೆ ತಮ್ಮ ಸಂಸ್ಥೆ ಪಾತ್ರವಾಗಿದೆ ಎಂದು ನ್ಯೂಸ್ ಫಸ್ಟ್ ಸಿಇಒ ಎಸ್. ರವಿಕುಮಾರ್ ತಿಳಿಸಿದ್ದಾರೆ.

ಬುಧವಾರ ರಾತ್ರಿ 8 ಗಂಟೆಗೆ ನ್ಯೂಸ್ಫಸ್ಟ್ನ ಪ್ರೈಂ ಟೈಮ್ ಸುದ್ದಿ ಇಂಡಿಯಾ ಫಸ್ಟ್‌ನಲ್ಲಿ ಎಐ ಮಾಯಾ ತನ್ನ ಮೊದಲ ಸುದ್ದಿ ವಾಚನ ಮಾಡಿದ್ದಾಳೆ. ಇನ್ಮುಂದೆ ಪ್ರತಿದಿನ ಸುದ್ದಿ ವಾಚಿಸಲಿದ್ದಾಳೆ ಎಂದು ಅವರು ಮಾಹಿತಿ ನೀಡಿದ್ದಾರೆ.

'ಮೂರು ತಿಂಗಳ ನಿರಂತರ ಪ್ರಯತ್ನದ ನಂತರ, ಭಾಷೆ, ನಿರೂಪಣೆ ಶೈಲಿ, ತಾಂತ್ರಿಕ ದೋಷಗಳು ಇವೆಲ್ಲವನ್ನು ಸರಿಪಡಿಸಿಕೊಂಡು ಸ್ಪಷ್ಟ ರೂಪ ಪಡೆದುಕೊಳ್ಳಲು ಸಾಧ್ಯವಾಗಿದೆ. ಸದ್ಯ ಲಿಪಿ ಇರುವ ವಿಶ್ವದ ಯಾವುದೇ ಭಾಷೆಯಲ್ಲಿ ಸುದ್ದಿ ವಾಚಿಸುವ ಸಾಮರ್ಥ್ಯ ಹೊಂದಿದ್ದಾಳೆ. ನ್ಯೂಸ್ಫಸ್ಟ್ ಡಿಜಿಟಲ್ ಮಾಧ್ಯಮದಲ್ಲಿ ಇಂಗ್ಲಿಷ್ನಲ್ಲಿಯೂ ಸದ್ಯದಲ್ಲೇ ಸುದ್ದಿ ವಾಚಿಸಲಿದ್ದಾಳೆ. ವೀಕ್ಷಕರು ಕೇಳುವ ಆಯ್ದ ಪ್ರಶ್ನೆಗಳಿಗೂ ಉತ್ತರಿಸಲಿದ್ದಾಳೆ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.