ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ದೇಶದಲ್ಲೇ ಮೊಟ್ಟಮೊದಲ ಬಾರಿಗೆ ‘ಬಿಎಸ್ 6’ ಬಸ್ಗಳನ್ನು ಖರೀದಿಸಲು ಮುಂದಾಗಿದೆ. ಈ ಬಸ್ಗಳು ಅತೀ ಶೀಘ್ರ ಸಂಸ್ಥೆಗೆ ಸೇರ್ಪಡೆಯಾಗಲಿವೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಶನಿವಾರ ‘ಬಿಎಸ್ 6’ ಬಸ್ಗಳ ಪರಿಶೀಲನೆ ನಡೆಸಿದರು. ಬಿಎಂಟಿಸಿಯು ‘ಬಿಎಸ್ 6’ ಮಾದರಿಯ ಒಟ್ಟು 565 ಬಸ್ಗಳನ್ನು ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ಖರೀದಿಸಲು ಕಾರ್ಯಾದೇಶ ನೀಡಿದೆ. ಈ ಎಲ್ಲ ಬಸ್ಗಳನ್ನು 2022ರ ಫೆಬ್ರುವರಿ ಒಳಗಾಗಿ ಕಂಪನಿಯು ಪೂರೈಸಲಿದೆ.

ಈ ಬಸ್ಗಳನ್ನು 2017-18ರಲ್ಲಿ ಬಸ್ಗಳ ಖರೀದಿಗಾಗಿಯೇ ಮೀಸಲಿಟ್ಟಿರುವ ಹಣದಿಂದ ಖರೀದಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈಶಿಷ್ಟ್ಯಗಳು: ಬಿಎಸ್6 ವಾಹನಗಳು ಪರಿಸರ ಸ್ನೇಹಿಯಾಗಿವೆ. ಇವುಗಳು ವಾತಾವರಣದಲ್ಲಿ ಮಾಲಿನ್ಯ ಉಂಟುಮಾಡುವುದಿಲ್ಲ. ಇವುಗಳ ಎಂಜಿನ್ ಸಾಮರ್ಥ್ಯ (197ಎಚ್ಪಿ) ಬಿಎಸ್ 4 ವಾಹನಗಳಿಗಿಂತ ಅಧಿಕ. ಬೆಂಕಿ ಅವಘಡಗಳ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಈ ಬಸ್ಗಳಲ್ಲಿ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.