ಬೆಂಗಳೂರು: ಚಿಕಿತ್ಸೆಗೆಂದು ಕರೆದೊಯ್ದ ವೇಳೆ ಮದ್ಯದ ಅಮಲಿನಲ್ಲಿ ವೈದ್ಯ ಹಾಗೂ ಶುಶ್ರೂಷಕಿ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆಯಲ್ಲಿದ್ದ ಚಿಕಿತ್ಸಾ ಉಪಕರಣಗಳನ್ನು ಹಾನಿಗೊಳಿಸಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನೇಪಾಳದ ಆಶಿಶ್ ಸೆರಾಯ್(36) ಬಂಧಿತ ಆರೋಪಿ. ಶ್ರೀಸಾಯಿ ಆಸ್ಪತ್ರೆಯ ವೈದ್ಯ ನಾಗೇಂದ್ರಪ್ಪ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಠಾಣಾ ವ್ಯಾಪ್ತಿಯ ನೀಲಾದ್ರಿ ರಸ್ತೆಯ ಅಂಗಡಿಯೊಂದರಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಆರೋಪಿಗೆ ಮದ್ಯ ಸೇವಿಸಿ ಬಂದು ಕೆಲಸ ಮಾಡುವ ಅಭ್ಯಾಸವಿತ್ತು. ಸೋಮವಾರ ಸಂಜೆಯೂ ಮದ್ಯ ಸೇವಿಸಿ ಅಂಗಡಿಗೆ ಬಂದಿದ್ದ ಆರೋಪಿ ಮುಖ್ಯರಸ್ತೆಗೆ ಬಂದು ವಾಹನಗಳನ್ನು ಅಡ್ಡಗಟ್ಟುವುದು, ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ. ಅಲ್ಲದೇ ರಸ್ತೆಯಲ್ಲೇ ಬಿದ್ದುಗಾಯ ಮಾಡಿಕೊಂಡಿದ್ದ.

ಸ್ಥಳೀಯರು ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು, ಸ್ಥಳೀಯರ ನೆರವು ಪಡೆದು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಪೊಲೀಸರು ಅಲ್ಲಿಂದ ತೆರಳಿದ ಮೇಲೆ ಚಿಕಿತ್ಸೆ ಕೊಡಲು ಮುಂದಾದ ನಾಗೇಂದ್ರ ಹಾಗೂ ಸಿಬ್ಬಂದಿ ಮೇಲೆ ನಡೆಸಿದ್ದ. ಉಪಕರಣಗಳಿಗೂ ಹಾನಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.

ಹಲ್ಲೆಯಿಂದ ವೈದ್ಯರ ತುಟಿ, ಬೆರಳುಗಳು ಹಾಗೂ ಕಾಲಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.