ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಪತ್ನಿ ಮೇಲೆ ಹಲ್ಲೆ: ಕಿರುತೆರೆ ನಟನ ವಿರುದ್ಧ ಎಫ್‌ಐಆರ್‌

Published 23 ಜುಲೈ 2024, 16:32 IST
Last Updated 23 ಜುಲೈ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದ ಆರೋಪದ ಅಡಿ ಕಿರುತೆರೆ ನಟ ಸನ್ನಿ ಮಹಿಪಾಲ್ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸನ್ನಿ ಮಹಿಪಾಲ್ ಮತ್ತು ಯುವತಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೂ ಪರಿಚಯ ಆಗಿತ್ತು. ಬಳಿಕ, ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಆತ್ಮೀಯವಾಗಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ಜೂನ್ 15ರಂದು ದೇವಸ್ಥಾನವೊಂದರಲ್ಲಿ ಮದುವೆ ಆಗಿದ್ದರು ಎಂದು ಹೇಳಲಾಗಿದೆ. ಮನೆಯವರಿಗೆ ಮದುವೆ ವಿಚಾರ ತಿಳಿಸಲು ಸಮಯ ಬೇಕಿದೆ. ಅದುವರೆಗೂ ಇಬ್ಬರು ಸ್ನೇಹಿತರಾಗಿಯೇ ಇರೋಣ ಎಂದು ಸನ್ನಿ ಮಹಿಪಾಲ್ ಅವರು ಮದುವೆಯಾದ ಯುವತಿಗೆ ಹೇಳಿದ್ದರು. ಅದರಂತೆ ಇಬ್ಬರೂ ಇದ್ದರು. ಈ ನಡುವೆ ಮಹಿಪಾಲ್ ಬೇರೊಂದು ಯುವತಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ವಿಷಯ ತಿಳಿದು, ಯುವತಿ ವಿಜ್ಞಾನನಗರದ ಮಹಿಪಾಲ್ ಮನೆಗೆ ಬಂದಿದ್ದರು’ ಎಂದು ಪೊಲೀಸರು ಹೇಳಿದರು.

ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಮಹಿಪಾಲ್, ಸಂತ್ರಸ್ತೆ ಮೇಲೆ ಹಲ್ಲೆ ಮಾಡಿದ್ದು, ಬಳಿಕ ಚಾಕುವಿನಿಂದ ಆಕೆಯ ಎಡಗೈ, ಎಡಭಾಗದ ಬೆನ್ನಿಗೆ ಇರಿಯಲಾಗಿದೆ. ಈ ವೇಳೆ ರಕ್ತಸ್ರಾವವಾಗಿ ಸಂತ್ರಸ್ತೆ ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಪತಿ ಸನ್ನಿ ಮಹಿಪಾಲ್ ಹಲ್ಲೆಯಿಂದ ಸಂತ್ರಸ್ತೆಗೆ ಗರ್ಭಪಾತವಾಗಿದೆ ಎನ್ನಲಾಗಿದೆ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT