ಬೆಂಗಳೂರು: ಅಲ್ಲಿ ಚಿಣ್ಣರು ಚಿತ್ರಗಳನ್ನು ಬಿಡಿಸುವುದರಲ್ಲಿ ತನ್ಮಯರಾಗಿದ್ದರು. ಸೊಗಸಾದ ಕಥೆಗಳನ್ನು ಹೇಳಿದರು. ಯುವಜನರು ಮೈಚಳಿ ಹಾರಿಹೋಗುವಂತೆ ನೃತ್ಯ ಮಾಡಿದರು. ಚಿಂತಕರು ದೇಶದ ಆರ್ಥಿಕತೆ, ರಾಜಕೀಯದ ಕುರಿತು ಚರ್ಚಿಸಿದರು.

ಅಲ್ಲಿ ಆಸಕ್ತರ ಮನ ತಣಿಸುವ ಚಿತ್ರ ಕಲಾಕೃತಿಗಳಿದ್ದವು. ನಾಟಕ, ಸಾಕ್ಷ್ಯಚಿತ್ರ ಹಾಗೂ ಚಲನಚಿತ್ರಗಳ ಪ್ರದರ್ಶನವೂ ಇತ್ತು. ಈ ಸ್ಥಳದ ಮಾಳಿಗೆಯಲ್ಲಿ ತಂಗಾಳಿಯ ಆಹ್ಲಾದಕರ ವಾತಾವರಣದಲ್ಲಿ ಇಂಪಾದ ಸಂಗೀತವನ್ನು ಕಿವಿ ತುಂಬಿಕೊಳ್ಳಬಹುದಿತ್ತು.

ದೊಮ್ಮಲೂರಿನ ‘ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್’ನ (ಬಿಐಸಿ) ‘ಬೆಂಗಳೂರು ಕಟ್ಟೆ’ಯಲ್ಲಿ ಭಾನುವಾರ ಕಲಾಲೋಕವೇ ಮೇಳೈಸಿತ್ತು. ಈ ಸಂಸ್ಥೆಯು ‘ಬಿಐಸಿ ಫೆಸ್ಟ್’ ಆಯೋಜಿಸುವ ಮೂಲಕ ತನ್ನ ಹೊಸ ಕಟ್ಟಡದ ಪ್ರಾಂಗಣವನ್ನು ಪರಿಚಯಿಸಿಕೊಂಡಿತು.

ಜ್ಯೋತಿ ಸೇವಾ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಬೆಳಿಗ್ಗೆ ವೃಂದ ಗಾಯನ ನಡೆಸಿಕೊಟ್ಟರು. ತಂಡದ ನಾಯಕ ಪ್ರವೀಣ್ ಮುಂದಾಳತ್ವದಲ್ಲಿ ಪ್ರಸ್ತುತಪಡಿಸಿದ ಸಾಮೂಹ ಗಾಯನಕ್ಕೆ ಶೋತ್ರುಗಳು ತಲೆದೂಗಿದರು. ಎನ್ಸೆಂಬಲ್ ಇಂಡಿಯಾ ಫೋರಂ ನಡೆಸಿಕೊಟ್ಟ ವ್ಯಾನ್ಗಾರ್ಡ್ ನಾಟಕ ಗಮನ ಸೆಳೆಯಿತು.

(ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ನ ನೂತನ ಕಟ್ಟಡದಲ್ಲಿ ಭಾನುವಾರ ನಡೆದ ಬಿಐಸಿ ಫೆಸ್ಟ್ ಕಾರ್ಯಕ್ರಮದಲ್ಲಿ ಮಕ್ಕಳು ಚಿತ್ರ ಬಿಡಿಸುವುದರಲ್ಲಿ ತಲ್ಲೀನರಾಗಿರುವುದು –ಪ್ರಜಾವಾಣಿ ಚಿತ್ರ)

ವುಡ್ ಕಟ್ ಪ್ರಿಂಟಿಂಗ್ : ’ಹಿಪ್ಪೊಕ್ಯಾಂಪಸ್’ ವತಿಯಿಂದ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ರೂಪಿಲಾಗಿತ್ತು. ಇಲ್ಲಿ ಮಕ್ಕಳು ತಮ್ಮ ಸ್ಮರಣೆಯ ಗೂಡಿನಲ್ಲಿ ಅಡಗಿದ್ದ ಕಥೆಗಳನ್ನು ತೊದಲು ಮಾತುಗಳ ಮೂಲಕ ಹಾರಿಬಿಟ್ಟರು. ‘ಗಾಂಧೀಜಿ ದಂಡಿಯಾತ್ರೆ ಕಥನ’ ಕೇಳುತ್ತಾ, ಬಾಪೂಜಿಯ ವಿವಿಧ ಭಂಗಿಯ ರೇಖಾಚಿತ್ರಗಳನ್ನು ಬಿಡಿಸಿದರು. ದಾರು ಹಲಗೆಯ ಮೇಲೆ ಇಷ್ಟವಾದ ರೂಪಗಳನ್ನು ಕೆತ್ತುತ್ತಾ, ‘ವುಡ್ ಕಟ್ ಪ್ರಿಂಟಿಂಗ್’ ಮಾಡಿ ಖುಷಿಪಟ್ಟರು.

ಸಮಕಾಲಿನ ನೃತ್ಯ ಪ್ರಕಾರವಾದ ಅಟ್ಟಕ್ಕಲರಿ ಕಣ್ತುಂಬಿಕೊಳ್ಳುವ ಅವಕಾಶವೂ ಇಲ್ಲಿತ್ತು. ಯುವಜನರ ತಂಡ ದೇಹವನ್ನು ಆಕರ್ಷಕವಾಗಿ ಬಾಗಿಸಿ, ಬಳುಕಿಸುತ್ತಾ ಸೇರಿದ್ದ ಜನರಿಗೆ ಮನರಂಜನೆಯ ಔತಣ ಉಣಬಡಿಸಿತು. ಜಪಾನಿ ಶೈಲಿಯ ಸಂಗೀತ ಆಲಿಸುವ ಅವಕಾಶವೂ ಇತ್ತು.

(ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ನ ನೂತನ ಕಟ್ಟಡದಲ್ಲಿ ಭಾನುವಾರ ನಡೆದ ಬಿಐಸಿ ಫೆಸ್ಟ್ ಕಾರ್ಯಕ್ರಮದಲ್ಲಿ ಚಿಣ್ಣರಿಗೆ ಕಾಮಿಕ್ ರಚನೆಯ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಕಲಾವಿದರು ಮಾತನಾಡಿದರು –ಪ್ರಜಾವಾಣಿ ಚಿತ್ರ )

‘ಬೆಂಗಳೂರು ಪನೋರಮಾ’ ವಿಭಾಗದಲ್ಲಿದ್ದ ತಜ್ಞರು ನಗರ ಬೆಳೆದು ಬಂದ ಕಥಾನಕಗಳನ್ನು ಕಟ್ಟಿಕೊಟ್ಟರು. ಕಂಟೋನ್ಮೆಂಟ್ ಪ್ರದೇಶ ವಿಸ್ತರಿಸಿದ ಬಗೆ ಹಾಗೂ ಅದರ ವೈಶಿಷ್ಟ್ಯ ಕಾಣೆಯಾಗುತ್ತಿರುವ ಕುರಿತು, ಬೆಂಗಳೂರಿನಲ್ಲಿ ಬಂಗಲೆಗಳನ್ನು ಕಟ್ಟಿದರೆ, ಸ್ಥಳವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಕುರಿತು ಕೂಡಾ ಮಾಹಿತಿ ಹಂಚಿಕೊಂಡರು.

20 ಕಲಾವಿದರು ರಚಿಸಿದ್ದ 40ಕ್ಕೂ ಹೆಚ್ಚು ಕಲಾಕೃತಿಗಳು ‘ಆರ್ಟ್ ಪಾರ್ಕ್’ನಲ್ಲಿ ಪ್ರದರ್ಶನಗೊಂಡವು. ತೈಲವರ್ಣ, ಜಲವರ್ಣ, ಅಕ್ರೆಲಿಕ್, ಮಿಶ್ರ ಮಾಧ್ಯಮ, ಪೋಟ್ರೈಟ್, ಪ್ರಿಂಟ್ ಮೇಕಿಂಗ್ ರಚನೆಗಳು ಗಮನ ಸೆಳೆದವು. ಆಸಕ್ತರು ಯುವ ಕಲಾವಿದರಿಂದ ತಮ್ಮ ಭಾವಚಿತ್ರಗಳನ್ನು ಬಿಡಿಸಿಕೊಂಡು, ಜೋಪಾನವಾಗಿ ಮನೆಗೆ ಒಯ್ದರು.

‘ಚಿಂತನ’ ಚಾವಡಿಯಲ್ಲಿ ಜನರು ‘ಪಡ್ಡಾಯಿ’ ತುಳು ಸಿನಿಮಾ ವೀಕ್ಷಿಸಿದರು. ಕವಿಗಳು ‘ಕನ್ನಡ ಕವಿತೆಗಳಲ್ಲಿನ ಆಧುನಿಕತೆ’ಯನ್ನು ಹುಡುಕಿದರು. ಶಿವರಾಮ ಕಾರಂತರ ಕಲಾ–ಸಾಹಿತ್ಯ ಕೃಷಿಯನ್ನು ಸ್ಮರಿಸಿದರು.

(ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ನ ನೂತನ ಕಟ್ಟಡದಲ್ಲಿ ಭಾನುವಾರ ನಡೆದ ಬಿಐಸಿ ಫೆಸ್ಟ್ ಕಾರ್ಯಕ್ರಮದಲ್ಲಿ ಕಲಾವಿದೆಯರು ನೃತ್ಯ ಪ್ರದರ್ಶನ ಮಾಡಿದರು.–ಪ್ರಜಾವಾಣಿ ಚಿತ್ರ)

ತಂಪಾದ ಗಾಳಿ–ಇಂಪಾದ ಸಂಗೀತ

ಕೇಂದ್ರದ ಮಾಳಿಗೆಯಲ್ಲಿ (ರೂಫ್ಟಾಪ್) ಬೆಳಿಗ್ಗೆಯಿಂದ ಸಂಜೆವರೆಗೂ ಜಾಕ್ ಆ್ಯಂಡ್ ಎನ್ಸೆಂಬಲ್ ತಂಡ ವಾದ್ಯ ಸಂಗೀತ ಮೊಳಗಿಸಿತು. ಜತೆಗೆ ಗಾಯನವೂ ಇತ್ತು.

ಸುತ್ತಲಿನ ವಾತಾವರಣದಿಂದ ಬೀಸಿ ಬರುತ್ತಿದ್ದ ತಂಗಾಳಿಗೆ ಮೈಯೊಡ್ಡುತ್ತಾ, ಸಂಗೀತವನ್ನು ಆಸ್ವಾದಿಸುತ್ತ, ಆಸಕ್ತರು ಇಲ್ಲಿದ್ದ ಆಟ–ಗಲಾಟ ಪುಸ್ತಕ ಮಳಿಗೆಯಲ್ಲಿ ಇಷ್ಟದ ಹೊತ್ತಗೆಗಳನ್ನು ಹುಡುಕಿ, ಖರೀದಿಸಿದರು. ಇಲ್ಲಿನ ಫುಡ್ಕೋರ್ಟ್ನಲ್ಲಿ ಬಗೆಬಗೆಯ ಖಾದ್ಯಗಳನ್ನು ಸವಿದರು.

‘ಮೈಕ್ರೊ ಫೈನಾನ್ಸ್ ವ್ಯವಸ್ಥೆ ಹದಗೆಟ್ಟಿದೆ’

‘ದೇಶದಲ್ಲಿ ಮೈಕ್ರೊ ಫೈನಾನ್ಸಿಂಗ್ ವ್ಯವಸ್ಥೆ ಹದಗೆಟ್ಟಿದೆ’ ಎಂದು ಹಣಕಾಸು ತಜ್ಞ ನಾರಾಯಣ್ ರಾಮಚಂದ್ರನ್ ಕಳವಳ ವ್ಯಕ್ತಪಡಿಸಿದರು.

ತಕ್ಷಶಿಲಾ ಸಂಸ್ಥೆಯು ‘ಬಿಐಸಿ ಫೆಸ್ಟ್’ನ ‘ಥಿಂಕರ್ ಕಟ್ಟೆ’ಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಅಂದಾಜು 6 ಕೋಟಿ ಉದ್ಯಮಗಳಿವೆ. ಆದರೆ, ನಮ್ಮ ರಾಷ್ಟ್ರೀಕೃತ ಬ್ಯಾಂಕ್ಗಳು 60 ದೊಡ್ಡ ಉದ್ಯಮಗಳಿಗೆ ಮಾತ್ರ ಹೆಚ್ಚು ಸಾಲಗಳನ್ನು ಕೊಡುತ್ತಿವೆ. ಇಂದು ದೊಡ್ಡ ಕಂಪನಿಗಳು ₹ 5 ಕೋಟಿ ಸಾಲವನ್ನು ಸುಲಭವಾಗಿ ಪಡೆಯುತ್ತವೆ. ಆದರೆ, ಸಣ್ಣ ಉದ್ಯಮಿ ₹ 5 ಲಕ್ಷ ಸಾಲ ಪಡೆಯಲೂ ಅಲೆದಾಡುವ ಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಣ್ಣ ಸಾಲಗಳನ್ನು ಕೊಡುವ ಉತ್ತಮ ವ್ಯವಸ್ಥೆ ರೂಪಿಸಿದರೆ, ಮೈಕ್ರೊ ಫೈನಾನ್ಸ್ ಕ್ಷೇತ್ರ 3 ಕೋಟಿ ಗ್ರಾಹಕರನ್ನು ಗಳಿಸುತ್ತದೆ. ಇದರತ್ತ ಆರ್ಥಿಕ ತಜ್ಞರು ಹಾಗೂ ಆಡಳಿತಗಾರರು ಸಹ ಹೆಚ್ಚು ಗಮನ ಹರಿಸುತ್ತಿಲ್ಲ’ ಎಂದು ದೂರಿದರು.

‘ದೇಶದ ಆರ್ಥಿಕ ಸಮಸ್ಯೆಗಳಿಗೆ ನೋಟು ಅಮಾನ್ಯೀಕರಣ ಒಂದೇ ಪರಿಹಾರವಾಗಲಾರದು. ಮಧ್ಯಮ ವರ್ಗ ಚಿನ್ನ ಖರೀದಿಗೆ ವ್ಯಯಿಸುವ ಮೊತ್ತವನ್ನು, ಮ್ಯೂಚುವಲ್ ಫಂಡ್ನಲ್ಲಿ ಹೂಡಿದರೆ ಆರ್ಥಿಕತೆ ಚಲನಶೀಲವಾಗುತ್ತದೆ. ಜನರಿಗೂ ಲಾಭ ಸಿಗುತ್ತದೆ. ಈ ಕುರಿತು ಆ ವರ್ಗದಲ್ಲಿ ಅರಿವು ಮೂಡಿಸಬೇಕಿದೆ’ ಎಂದರು.

(ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ನ ನೂತನ ಕಟ್ಟಡದಲ್ಲಿ ಭಾನುವಾರ ನಡೆದ ಬಿಐಸಿ ಫೆಸ್ಟ್ ಕಾರ್ಯಕ್ರಮದಲ್ಲಿ ಆ್ಯಂಪಿ ಥಿಯೇಟರ್ನಲ್ಲಿ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು –ಪ್ರಜಾವಾಣಿ ಚಿತ್ರ)

ವಿದ್ಯಾರ್ಥಿಗಳ ಅಭಿಪ್ರಾಯಗಳು

ಫೆಸ್ಟ್ ತುಂಬಾ ಚೆನ್ನಾಗಿತ್ತು. ನಾನು ಇಲ್ಲಿ ಕಾಮಿಕ್ ಬರೆದೆ, ಡ್ರಾಯಿಂಗ್ ಮಾಡಿದೆ, ಕಥೆ ಹೇಳಿದೆ. ಮತ್ತೊಮ್ಮೆ ಫೆಸ್ಟ್ ನಡೆದರೆ, ಅಮ್ಮನೊಂದಿಗೆ ಮತ್ತೆ ಬರುತ್ತೇನೆ.

ಸೌಜನ್ಯಾ, 4ನೇ ತರಗತಿ, ಬಸವೇಶ್ವರ ನಗರ

ಬಿಐಸಿ ಕೇಂದ್ರವನ್ನು ತುಂಬ ಸುಂದರವಾಗಿ ನಿರ್ಮಿಸಿದ್ದಾರೆ. ಬೆಂಗಳೂರಿನ ಐತಿಹಾಸಿಕ ಘಟ್ಟಗಳ ಕುರಿತು ತಜ್ಞರು ತಿಳಿಸಿದ ಮಾಹಿತಿ ಆಸಕ್ತಿದಾಯಕವಾಗಿತ್ತು

ಸಂಧ್ಯಾ, ಜೆ.ಪಿ.ನಗರ

ಫೆಸ್ಟ್ ಅನ್ನು ತುಂಬಾ ಚೆನ್ನಾಗಿ ಆಯೋಜನೆ ಮಾಡಿದ್ದಾರೆ. ಥಿಂಕರ್ ಕಟ್ಟೆಯಲ್ಲಿ ಆಯೋಜಿಸಿದ್ದ ಸಂವಾದಗಳು ನನಗೆ ತುಂಬಾ ಇಷ್ಟವಾದವು.

ರಿತೇಶ್ ಕುಮಾರ್, ಹೆಗಡೆ ನಗರ

ಇಂದಿನ ಫೆಸ್ಟ್ನಲ್ಲಿ ಕಲೆಗಳಿಗೆ ಆದ್ಯತೆ ನೀಡಿದ್ದಾರೆ. ಇಂತಹ ಚಟುವಟಿಕೆ ನಿರಂತರವಾಗಿ ನಡೆದರೆ, ಈ ಸಂಸ್ಥೆ ನಗರದ ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.

ಆ್ಯನಿ ಚಾಂಡಿ ಮ್ಯಾಥ್ಯೂ, ಬ್ರಂಟನ್ ರೋಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.