ಬೆಂಗಳೂರು: ‘ಆಸ್ತಿ ವಿಚಾರವಾಗಿ ತಂದೆ, ಸೋದರ ಹಾಗೂ ಸೋದರಿ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿ, ಆ್ಯಸಿಡ್ ದಾಳಿ ನಡೆಸಿದ್ಧಾರೆ’ ಎಂದು ಆರೋಪಿಸಿ, ಶೆಟ್ಟಿಹಳ್ಳಿಯ ನಿವಾಸಿ ಕಿರಣ್ ಎಂಬುವರು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಬಾಗಲಗುಂಟೆ ನಿವಾಸಿ, ದೂರುದಾರರ ತಂದೆ ರಾಮಕೃಷ್ಣಯ್ಯ, ಸೋದರಿ ಕಲಾವತಿ, ಸೋದರ ಉಪೇಂದ್ರ ಕುಮಾರ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

‘ಕಿರಣ್ ಅವರ ಎಡಭಾಗದ ಕಣ್ಣು ಹಾಗೂ ಎದೆಯ ಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ಧಾರೆ’ ಎಂದು ಮೂಲಗಳು ತಿಳಿಸಿವೆ.

ದೂರಿನಲ್ಲಿ ಏನಿದೆ?: ‘ಬಾಗಲಗುಂಟೆಯ ಅರುಣೋದಯ ಆಸ್ಪತ್ರೆಯ ಎದುರಿನ 5ನೇ ಕ್ರಾಸ್ನಲ್ಲಿ ರಾಮಕೃಷ್ಣಯ್ಯ ಅವರಿಗೆ ಸೇರಿ ಮನೆಯಿದೆ. ಅದು ರಾಮಕೃಷ್ಣಯ್ಯ ಅವರ ಸ್ವಯಾರ್ಜಿತ ಆಸ್ತಿ. ಈ ಮನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವ ಉದ್ದೇಶದಿಂದ ನಮ್ಮ ತಂದೆಗೆ ಅಕ್ಕ ಚಾಡಿ ಮಾತು ಹೇಳಿದ್ದರು. ಇತ್ತೀಚೆಗೆ ತಾಯಿಯ ತಿಥಿ ಕಾರ್ಯದ ವಿಚಾರವಾಗಿ ಮಾತನಾಡಲು ಅವರ ಮನೆಯ ಬಳಿಗೆ ಹೋಗಿದ್ದ ವೇಳೆ ನನ್ನ ಮೇಲೆ ಹಲ್ಲೆ ನಡೆಸಿದರು. ಅಲ್ಲದೇ ಆ್ಯಸಿಡ್ ದಾಳಿ ನಡೆಸಿದರು’ ಎಂದು ಕಿರಣ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.