ಬೆಂಗಳೂರು: ‘ಬಸವಣ್ಣನವರ ಅನುಭವ ಮಂಟಪದ ಮೂಲಕ ಜಗತ್ತಿನಲ್ಲಿ ಪ್ರಥಮಬಾರಿಗೆ ಪ್ರಜಾಪ್ರಭುತ್ವ ಸ್ಥಾಪಿಸಲಾಯಿತು. ಹೀಗಾಗಿಯೇ ಮೊದಲು ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಆರಂಭವಾಗಿದ್ದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ವಿಧಾನಸೌಧದ ಮುಂಭಾಗ ಜಗಜ್ಯೋತಿ ಬಸವೇಶ್ವರ ಹಾಗೂ ನಾಡಪ್ರಭು ಕೆಂಪೇಗೌಡ ಪ್ರತಿಮೆಗಳನ್ನು ಅನಾವರಣಗೊಳಿಸಿ ಭಾನುವಾರ ಅವರು ಮಾತನಾಡಿದರು.

‘ಕೋವಿಡ್ ಅಡೆತಡೆಯಲ್ಲೂ ಯಡಿಯೂರಪ್ಪ ಅತ್ಯಂತ ಯಶಸ್ವಿ ಕಾರ್ಯ ಮಾಡಿದ್ದಾರೆ. ನಮಗೆಲ್ಲರಿಗೂ ಕಾಳಜಿಯಿದ್ದ ಬೆಂಗಳೂರನ್ನು ರಕ್ಷಿಸಿದರು. ಅದಕ್ಕೆ ಅವರು ಅಭಿನಂದನಾರ್ಹರು. ಅದೇ ಹಾದಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಉತ್ತಮ ಆಡಳಿತ ಮುಂದುವರಿಯಿತು. ಬೆಂಗಳೂರಿನ ಪ್ರತಿ ಕ್ಷೇತ್ರದಲ್ಲೂ ಕಮಲ ಅರಳಬೇಕು. ಈ ನಗರವನ್ನು ಮತ್ತೊಂದು ಮಹತ್ತರ ಎತ್ತರಕ್ಕೆ ಕೊಂಡೊಯ್ಯುತ್ತೇವೆ’ ಎಂದರು.

ಹಸ್ತಾಂತರ: ಕಲಾವಿದರು, ಸಾಹಿತಿಗಳು, ಸಾಂಸ್ಕೃತಿಕ ಲೋಕದ ಪ್ರತಿಭೆಗಳಿಗೆ ಮಹಾನ್ ವೇದಿಕೆ ಕಲ್ಪಿಸಿರುವ ‘ ನಮ್ಮ ಬೆಂಗಳೂರು ಹಬ್ಬ’ ನಡೆದಿರುವುದು ಸಂತಸದ ಸಂಗತಿ ಎಂದು ಹೇಳಿದ ಅಮಿತ್ ಶಾ, ಬೆಂಗಳೂರು ಹಬ್ಬದ ಸಮಾರೋಪದಲ್ಲಿ ಹಬ್ಬವನ್ನು ಪ್ರತಿ ವರ್ಷ ಮುಂದುವರಿಸುವ ‘ಸುರಕ್ಷತಾ ಲೊಗೊ’ವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಹಸ್ತಾಂತರಿಸಿದರು.

‘ಬಸವೇಶ್ವರ ಹಾಗೂ ಕೆಂಪೇಗೌಡರ ಪ್ರತಿಮೆಗಳನ್ನು ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಹಿಂದೆಯೇ ಸ್ಥಾಪನೆಯಾಗಬೇಕಿತ್ತು. ಯಾಕೆ ಸ್ಥಾಪಿಸಲಿಲ್ಲ ಎಂಬುದನ್ನು ಹಿಂದೆ ಅಧಿಕಾರದಲ್ಲಿದ್ದವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. 75 ದಿನಗಳಲ್ಲಿ ಈ ಪ್ರತಿಮೆಗಳನ್ನು ಸ್ಥಾಪಿಸಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚನ್ನಮ್ಮ, ರಾಯಣ್ಣ ಪ್ರತಿಮೆ: ಬೆಂಗಳೂರಿನ ಬನಶಂಕರಿಯಲ್ಲಿ ಸುತ್ತೂರು ಶ್ರೀಗಳ ಪುತ್ಥಳಿ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಮಾರ್ಚ್ 28ರಂದು ಪ್ರತಿಷ್ಠಾಪಿಸ
ಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಬಸವೇಶ್ವರ ಹಾಗೂ ಕೆಂಪೇಗೌಡರು ನಾಡಿನ ಆಡಳಿತದಲ್ಲಿ ಉತ್ತಮ ಪುರುಷರು. ಅವರ ಪ್ರತಿಮೆ ಇಂದು ಅನಾವರಣ
ಗೊಂಡಿರುವುದು ಎಲ್ಲರಿಗೂ ಸಂತಸದಾಯಕ ಹಾಗೂ ಮಾರ್ಗದರ್ಶಿ’ ಎಂದರು.

ಶಾಸಕ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ, ಶಿರಾದ ಸ್ಪಟಿಕಪುರ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ, ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ
ಹಾಗೂ ಬೆಂಗಳೂರಿನ ಸಚಿವರು ಹಾಗೂ ಬಿಜೆಪಿ ಶಾಸಕರು ಇದ್ದರು.

ಸಂಗೀತ ಸಂಜೆ: ‘ಬೆಂಗಳೂರು ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ‘ಸಂಗೀತ ಸಂಜೆ’ ಆಯೋಜಿಸಲಾಗಿತ್ತು. ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ಗುರುಕಿರಣ್, ಗಾಯಕರಾದ ಅರ್ಚನಾ ಉಡುಪ, ಶಮಿತಾ ಮಲ್ನಾಡ್, ಚೇತನ್ ಕನ್ನಡ ಹಾಡುಗಳಿಗೆ ಧ್ವನಿಯಾದರು. ಮಾಸ್ಟರ್ ಆನಂದ ನಿರೂಪಿಸಿದರು. ಕಲಾತಂಡಗಳಿಂದ ನೃತ್ಯ ಪ್ರದರ್ಶನವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.