ಬೆಂಗಳೂರು: ರೇಸ್‌ಕೋರ್ಸ್ ರಸ್ತೆಗೆ ನಟ ಅಂಬರೀಶ್ ಹೆಸರನ್ನಿಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅನುಮೋದನೆ ನೀಡಿದ್ದಾರೆ.

ರೇಸ್‌ಕೋರ್ಸ್ ರಸ್ತೆಯ ರಾಂನಾರಾಯಣ್ ಚೆಲ್ಲಾರಾಂ ಕಾಲೇಜಿನಿಂದ ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದವರೆಗಿನ ರಸ್ತೆಗೆ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಘೋಷಿಸಿದ್ದರು.

ಈ ಪ್ರಸ್ತಾವನೆಯನ್ನು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಪೂರ್ವ ವಲಯದ ಜಂಟಿ ಆಯುಕ್ತರು ಕಳುಹಿಸಿದ್ದರು. ತುರ್ತಾಗಿ ನಾಮಕರಣ ಮಾಡುವುದು ಅವಶ್ಯವಾಗಿರುವುದರಿಂದ, ಬಿಬಿಎಂಪಿ ಕಾಯ್ದೆಯಂತೆ ಅನುಮೋದನೆ ನೀಡಬೇಕೆಂದು ಕೋರಿದ್ದರು. ಮಾರ್ಚ್ 14ರಂದು ಪೂರ್ವ ವಲಯದ ಆಯುಕ್ತರು ಟಿಪ್ಪಣಿಯನ್ನು ಆಡಳಿತಾಧಿಕಾರಿಯವರ ಮುಂದಿರಿಸಿದ್ದರು. ರೇಸ್‌ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡುವ ಕಾರ್ಯಕ್ರಮ ವಾರದಲ್ಲೇ ನಡೆಯಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.