ಬೆಂಗಳೂರು: ನಗರದಲ್ಲಿ ಬಿ ಖಾತಾಗಳನ್ನು ಹೊಂದಿರುವ 2.5 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಸಂಕಟ ನಿವಾರಿಸುವ ಸಲುವಾಗಿ ಇಂತಹ ಖಾತಾಗಳನ್ನು ‘ಎ’ಖಾತಾಗಳನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವುದಾಗಿ 2020–21ನೇ ಸಾಲಿನ ಬಿಬಿಎಂಪಿ ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದಿನ ಬಜೆಟ್ಗಳಲ್ಲೂ ಈ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಇದುವರೆಗೂ ಈಡೇರಿಲ್ಲ. ಆದರೆ ಈ ಬಾರಿ ಅದನ್ನು ಜಾರಿಗೆ ತರುತ್ತೇವೆ ಎಂದು ಮೇಯರ್ ಎಂ.ಗೌತಮ್ ಕುಮಾರ್ ತಿಳಿಸಿದರು.

ಆಸ್ತಿ ತೆರಿಗೆ ಹಾಗೂ ಪಾವತಿ ವಿಧಾನ ಸರಳೀಕರಿಸುವುದಾಗಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಪ್ರಕಟಿಸಿದ್ದಾರೆ. ಅದರ ಬಗ್ಗೆ ಹೆಚ್ಚು ವಿವರಗಳನ್ನು ಹಂಚಿಕೊಂಡಿಲ್ಲ. ಈ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ ₹ 3,500 ಕೋಟಿ ನಿರೀಕ್ಷೆ ಮಾಡಿದ್ದಾರೆ. ಟೋಟಲ್ ಸ್ಟೇಷನ್ ಸರ್ವೇ ವೇಳೆ ಕಂಡು ಬಂದಿರುವ ಆಸ್ತಿ ತೆರಿಗೆ ವ್ಯತ್ಯಾಸದ ಮೊತ್ತವಾದ ₹ 325 ಕೋಟಿ ವಸೂಲಿ ಮಾಡುವ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ.

ತೆರಿಗೆ ಸಂಗ್ರಹದಲ್ಲಿ ಶೇ 95ಕ್ಕೂ ಹೆಚ್ಚು ಗುರಿಸಾಧನೆ ಮಾಡುವ ಸಹಾಯಕ ಕಂದಾಯ ಅಧಿಕಾರಿ ಮತ್ತು ಅವರ ಕಚೇರಿ ಸಿಬ್ಬಂದಿಗೆ ₹ 1ಲಕ್ಷ ಪ್ರೋತ್ಸಾಹ ಧನ ನೀಡುವುದಾಗಿ ಪ್ರಕಟಿಸಿದ್ದಾರೆ. ಇದಕ್ಕಾಗಿ ₹ 8 ಕೋಟಿ ಕಾಯ್ದಿರಿದ್ದಾರೆ.

ಉದ್ದಿಮೆ ಪರವಾನಗಿ ವ್ಯವಸ್ಥೆ ಸರಳೀಕರಿಸುವ ಹಾಗೂ ಹೋಟೆಲ್ಗಳನ್ನು ಎ,ಬಿ,ಸಿ,ಡಿ ಎಂದು ವರ್ಗೀಕರಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಕಟ್ಟಡ ನಕ್ಷೆ ವಿತರಣೆಗೆ ಏಕಗವಾಕ್ಷಿ ಯೋಜನೆ ಈಗಾಗಲೇ ಚಾಲ್ತಿಯಲ್ಲಿದೆ. ಆನ್ಲೈನ್ ಮೂಲಕ ನಕ್ಷೆ ಮಂಜೂರು ಮಾಡುವುದರಿಂದ ₹ 613.52 ಕೋಟಿ ನಿರೀಕ್ಷೆ ಮಾಡಿದ್ದಾರೆ.

ಆಡಳಿತ ಸುಧಾರಣೆ ಕ್ರಮಗಳು

* ಇ– ಕಚೇರಿ ವ್ಯವಸ್ಥೆ ವಲಯ ಕಚೇರಿಗಳಿಗೂ ವಿಸ್ತರಣೆ

* 938 ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ಭರ್ತಿ ಮಾಡಲು ಕ್ರಮ

* ಪಾಲಿಕೆಯ ಹೊಸ ವೃಂದ ಮತ್ತು ನೇಮಕಾತಿ ನಿಯಮ ಪ್ರಕಾರ ಹುದ್ದೆಗಳ ಪುನರ್ ವಿಂಗಡಣೆ

* ಪಾಲಿಕೆಯ ಕಾಯಂ ಮತ್ತು ನಿವೃತ್ತ ಅಧಿಕಾರಿಗಳಿಗೆ/ ನೌಕರರಿಗೆ ಆರೋಗ್ಯ ವಿಮೆ

* ಐಪಿಪಿ ಕೇಂದ್ರದ ತಂತ್ರಾಂಶ ಉನ್ನತೀಕರಣಕ್ಕೆ ₹ 9 ಕೋಟಿ

* ಬಜೆಟ್ ಮತ್ತು ಲೆಕ್ಕಪತ್ರ ನಿಯಮಾವಳಿ ರಚನೆ

* ಸಾಲ ಮರುವಾವತಿಗೆ ₹ 379 ಕೋಟಿ

ಪೌರಕಾರ್ಮಿಕರಿಗೆ, ಪರಿಶಿಷ್ಟರ ಅಭಿವೃದ್ಧಿಗೆ₹ 361 ಕೋಟಿ

ಪೌರಕಾರ್ಮಿಕರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಭರಪೂರ ಯೋಜನೆಗಳನ್ನು ಪ್ರಕಟಿಸಲಾಗಿದೆ. ಈ ಸಲುವಾಗಿ ಶೇ 24.10ರ ಯೋಜನೆ ಅಡಿ ₹ 361.34 ಕೋಟಿ ಮೀಸಲಿಡಲಾಗಿದೆ

* ಪೌರಕಾರ್ಮಿಕರು, ಗ್ಯಾಂಗ್ಮನ್ಗಳ ಮಕ್ಕಳ ಶಿಕ್ಷಣಕ್ಕೆ ₹ 5 ಕೋಟಿ, ಅವರ ಕುಟುಂಬದ ಆರೋಗ್ಯ ಕಾರ್ಯಕ್ರಮಕ್ಕೆ ₹ 1 ಕೋಟಿ

* ಪೌರಕಾರ್ಮಿಕರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯಂ ಮತ್ತು ಗುತ್ತಿಗೆ ನೌಕರರ ಕಲ್ಯಾಣಕ್ಕಾಗಿ ₹ 10 ಕೋಟಿ

* ಪೌರಕಾರ್ಮಿಕರು ಸ್ವಂತ ಮನೆ ಹೊಂದಲು ಸಹಾಯಧನ ನೀಡಲು ₹ 36 ಕೋಟಿ

* ಸ್ವಚ್ಛತಾ ಕಿಟ್ ನೀಡಲು ₹ 5ಕೋಟಿ

* ಪ್ರತಿ ವಾರ್ಡ್ಗೆ 5 ಮನೆ ಮಂಜೂರು ಮಾಡಲು ₹ 49.50 ಕೋಟಿ

* ಪರಿಶಿಷ್ಟ ಜಾತಿ ಮತ್ತು ಪಂಗಡದ ಆರೋಗ್ಯ ಕಾರ್ಯಕ್ರಮಗಳಿಗೆ ₹ 5 ಕೋಟಿ, ಶಿಕ್ಷಣ ಕಾರ್ಯಕ್ರಮಗಳಿಗೆ ₹ 25 ಕೋಟಿ

* ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುವ ಪರಿಶಿಷ್ಟರಿಗೆ ಮನೆ ಒದಗಿಸಲು ₹ 1 ಕೋಟಿ

ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ವೈಯಕ್ತಿಕ ಮನೆ ನಿರ್ಮಾಣ ಯೋಜನೆಗೆ ₹ 44.50 ಕೋಟಿ

* ಆರೋಗ್ಯ ಕಾರ್ಯಕ್ರಮಗಳಿಗೆ ₹ 2 ಕೋಟಿ

* ಶೈಕ್ಷಣಿಕ ಕಾರ್ಯಕ್ರಮಗಳಿಗೆ ₹ 5 ಕೋಟಿ

* ಶೇ 7.5ರ ಯೋಜನೆ ಅಡಿ ಮೂಲಸೌಕರ್ಯ ಅಭಿವೃದ್ಧಿಗೆ ₹ 108.42 ಕೋಟಿ

ಅಂಗವಿಕಲರ ಇತರ ಕಾರ್ಯಕ್ರಮಗಳು

ಅಂಗವಿಕಲರಿಗೆ ಮನೆ ನಿರ್ಮಾಣಕ್ಕೆ ₹ 30 ಕೋಟಿ ಹಾಗೂ ಪ್ರತಿ ವಾರ್ಡ್ನಲ್ಲಿ10 ಮಂದಿಗೆ ತ್ರಿಚಕ್ರ ವಾಹನೊದಗಿಸಲು ₹ 10 ಕೋಟಿ ಕಾಯ್ದಿರಿಸಲಾಗಿದೆ. ಅಂಗವಿಕಲರಿಗೆ ನೆರವಾಗಲು ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಲು ಹಾಗೂ ರ್ಯಾಂಪ್ ನಿರ್ಮಾಣಕ್ಕೆ ₹ 10 ಕೋಟಿ ಹಂಚಿಕೆ ಮಾಡಲಾಗಿದೆ.

ಆರೋಗ್ಯ ಕಾರ್ಯಕ್ರಮಕ್ಕೆ ₹ 5 ಕೋಟಿ

ಶಿಕ್ಷಣ ಕಾರ್ಯಕ್ರಮಗಳಿಗೆ ₹ 4.8 ಕೋಟಿ

ಸ್ವ ಉದ್ಯೋಗ ತರಬೇತಿಗೆ ₹ 5 ಕೋಟಿ

ಆರ್ಥಿಕ ನೆರವು ನೀಡಲು ₹ 1 ಕೋಟಿ

ಕ್ರೀಡಾಪಟುಗಳಿಗೆ ನೆರವಾಗಲು ₹ 1.5 ಕೋಟಿ

ಇವರಿಗಾಗಿ ಶಾಲೆ ನಡೆಸುವ ದತ್ತಿ ಶೀಕ್ಷಣ ಸಂಸ್ಥೆಗಳಿಗೆ ನೆರವಾಗಲು ₹ 5 ಕೋಟಿ

ಸಾಮಾನ್ಯ ವರ್ಗದವರ ಕಲ್ಯಾಣ ಕಾರ್ಯಕ್ರಮಗಳಿಗೆ ₹ 604.12 ಕೋಟಿ ಕಾಯ್ದಿರಿಸಲಾಗಿದೆ

ಹಿರಿಯ ನಾಗರಿಕರ ಕಾರ್ಯಕ್ರಮಗಳಿಗೆ ₹ 5 ಕೋಟಿ

ನಿರಾಶ್ರಿತರ ರಾತ್ರಿ ತಂಗುದಾಣ ನಿರ್ಮಾಣ ನಿರ್ವಹಣೆಗೆ ₹ 5 ಕೋಟಿ

ಸಂಕಷ್ಟದಲ್ಲಿರುವ ಸಾಮಾನ್ಯ ವರ್ಗದವರಿಗೆಮನೆ ನಿರ್ಮಾಣಕ್ಕೆ ನೆರವಾಗಲು ₹ 15 ಕೋಟಿ

ಸ್ವಾವಲಂಬಿಗಳಾಗಲು ಉತ್ತೇಜಿಸುವ ಕಾರ್ಯಕ್ರಮಗಳಿಗೆ ₹ 1.5 ಕೋಟಿ

ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗೆ ₹ 1.5 ಕೋಟಿ

ತೃತೀಯಲಿಂಗಿಗಳ ಅಭಿವೃದ್ಧಿಗೆ ₹1 ಕೋಟಿ

ಪ್ರತಿವಾರ್ಡ್ನಲ್ಲಿ ತಲಾ 50 ಟೈಲರಿಂಗ್ ಯಂತ್ರ ವಿತರಣೆಗೆ ₹ 4 ಕೋಟಿ

* ಗೋಶಾಲೆಗಳಿಗೆ ಮೇವು ಒದಗಿಸಲು ₹ 50 ಲಕ್ಷ

* ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳಲ್ಲಿ ಪಾಲಿಕೆ ಶಾಲೆಗಳ ನಿರ್ಮಾಣಕ್ಕೆ ₹ 10 ಕೋಟಿ

* ಬೊಮ್ಮನಹಳ್ಳಿ ಅಪೋಲೊ ಆಸ್ಪತ್ರೆ ಬಳಿ ಮಕ್ಕಳ ಚಿಕಿತ್ಸೆಗೆ ಪಂಡಿತ ದೀನದಯಳ್ ಉಪಾಧ್ಯಾಯ ಹೆಸರಿನಲ್ಲಿ 25 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ₹ 20 ಕೋಟಿ

* ಪಾಲಿಕೆ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೇವೆ. ಈ ಸಲುವಾಗಿ ನೆಫ್ರೊಲಾಜಿಸ್ಟ್ಗಳ ನೇಮಕ

* ಡಯಾಲಿಸಿಸ್ ಕೇಂದ್ರಗಳ ನಿರ್ವಹಣೆಗೆ ₹ 16 ಕೋಟಿ

* ಬಡರೋಗಿಗಳಿಗೆ ಉಚಿತ ಸ್ಟೆಂಟ್ ಅಳವಡಿಕೆಗೆ ಮತ್ತುಆಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ನೆರವಾಗಲು ₹ 4ಕೋಟಿ

* ಲಿಂಕ್ ವರ್ಕರ್ಗಳ ಗೌರವಧನದಲ್ಲಿ ₹ 1000 ಹೆಚ್ಚಳ

* ಬೊಮ್ಮನಹಳ್ಳಿ ವಲಯದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ₹ 5 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.