ಬೆಂಗಳೂರು: ಬಿಬಿಎಂಪಿ 2020–21ನೇ ಸಾಲಿನ ಬಜೆಟ್ನಲ್ಲಿ ಕೋವಿಡ್–19 ನಿಯಂತ್ರಣಕ್ಕೆ ಹಾಗೂ ಲಾಕ್ಡೌನ್ ವೇಳೆ ಸಂತ್ರಸ್ತರ ನೆರವಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಆದ್ಯತೆ ನೀಡದ ಬಗ್ಗೆ ಪಕ್ಷಭೇದ ಮರೆತು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಬಜೆಟ್ ಕುರಿತು ಚರ್ಚಿಸಲು ವಿಡಿಯೊ ಕಾನ್ಫರೆನ್ಸ್ ಮೂಲಕ ಬುಧವಾರ ನಡೆದ ಸಭೆಯಲ್ಲಿ, ‘ಕೋವಿಡ್ –19 ನಿಯಂತ್ರಣಕ್ಕೆ ಸಂಬಂಧಿಸಿ ವಾರ್ಡ್ ಮಟ್ಟದಲ್ಲಿ ಬಳಸುವುದಕ್ಕೆ ಅನುದಾನ ನೀಡಬೇಕು’ ಎಂದು ಎಲ್ಲ ಪಕ್ಷಗಳ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಮಣಿದ ಆಡಳಿತ ಪಕ್ಷ, ವಾರ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ₹ 20 ಲಕ್ಷವನ್ನು ಕೋವಿಡ್ ಸಂಬಂಧಿ ಕಾರ್ಯಗಳಿಗೆ ಬಳಸಲು ಅವಕಾಶ ಕಲ್ಪಿಸುವ ಕುರಿತು ನಿರ್ಣಯ ಕೈಗೊಂಡಿತು. ‘ವಾರ್ಡ್ನ ಪಾಲಿಕೆ ಸದಸ್ಯರು ಸೂಚಿಸುವ ಕಾರ್ಯಕ್ರಮಗಳಿಗೆ ಹಣ ಬಿಡುಗಡೆ ಮಾಡಲು ಆಯುಕ್ತರು ಕ್ರಮಕೈಗೊಳ್ಳಬೇಕು’ ಎಂದು ಮೇಯರ್ ಎಂ.ಗೌತಮ್ ಕುಮಾರ್ ಸೂಚಿಸಿದರು.

‘ವಾರ್ಡ್ನ ಅಭಿವೃದ್ಧಿ ಕಾಮಗಾರಿಗಳ ಅನುದಾನದಲ್ಲಿ ಪ್ರತಿ ವಾರ್ಡ್ನಿಂದ ₹ 25 ಲಕ್ಷದಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಲ್ಲದೇ ಕೋವಿಡ್ ನಿಯಂತ್ರಣ ಸಂಬಂಧ ಹೆಚ್ಚುವರಿಯಾಗಿ ಪ್ರತಿ ವಾರ್ಡ್ಗೆ ₹ 20 ಲಕ್ಷ ಬಳಸಲಾಗುತ್ತದೆ’ ಎಂದು ಮೇಯರ್ ‘ಪ್ರಜಾವಾಣಿ’ಗೆ ತಿಳಿಸಿದರು.

₹ 1000 ಕೋಟಿ ಪ್ಯಾಕೇಜ್ ನೀಡಿ

ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ‘ಮುಖ್ಯಮಂತ್ರಿ ಪರಿಹಾರ ನಿಧಿಗೆ ₹100 ಕೋಟಿ ಬೇಕಾದರೂ ನೀಡಿ. ಆದರೆ, ವಾರ್ಡ್ ಅಭಿವೃದ್ಧಿ ಅನುದಾನವನ್ನು ಆಯಾ ವಾರ್ಡ್ನಲ್ಲೇ ಕೋವಿಡ್ –19 ಸಂಬಂಧಿ ಕಾರ್ಯಗಳಿಗೆ ಬಳಸಬೇಕು. ಇಲ್ಲದಿದ್ದರೆ ಈ ಸಲುವಾಗಿ ₹ 1000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ’ ಎಂದು ಒತ್ತಾಯಿಸಿದರು.

‘ಜನ ಈಗ ಅಭಿವೃದ್ಧಿ ಕಾಮಗಾರಿಗಳ ಬದಲು ಸಾಂಕ್ರಾಮಿಕ ಪಿಡುಗಿನ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೌರಕಾರ್ಮಿಕರು, ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಅಧಿಕಾರಿಗಳ ಸುರಕ್ಷತೆ ಹಾಗೂ ಬೀದಿಗೆ ಬಿದ್ದ ಬಡವರಿಗೆ ನೆರವಾಗುವುದೇ ಈಗಿನ ತುರ್ತು’ ಎಂದು ನೆನಪಿಸಿದರು.

ಕಾಂಗ್ರೆಸ್ನ ಆರ್.ಸಂಪತ್ರಾಜ್, ‘ಕೋವಿಡ್ ನಿಯಂತ್ರಣದ ಕೆಲಸಗಳನ್ನುಸರ್ಕಾರವೇ ಮಾಡಲಿ ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ಕೋವಿಡ್ ತಪಾಸಣೆಗೆ ಒಳಪಡಿಸುವ ಕಿಟ್ ಖರೀದಿಸಿ. ಮನೆ ಮನೆಗೆ ಮಾಸ್ಕ್, ಸ್ಯಾನಿಟೈಸರ್ ಪೂರೈಸಿ. ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ) ಕಿಟ್ ಖರೀದಿಸಿ. ಮುಂಬೈನಲ್ಲಿ ಪೌರಕಾರ್ಮಿಕರಲ್ಲೂ ಈ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲೂ ಎಚ್ಚೆತ್ತುಕೊಳ್ಳಿ‘ ಎಂದರು.

ಆಡಳಿತ ಪಕ್ಷದ ಸದಸ್ಯರಾದ ಮಂಜುನಾಥರಾಜು, ‘ಲಾಕ್ಡೌನ್ ತೆರವುಗೊಂಡ ಬಳಿಕವೂ ಕೊರೊನಾ ವೈರಸ್ ಜೊತೆಗೆ ಬದುಕಬೇಕಾಗುತ್ತದೆ. ಎಲ್ಲದಕ್ಕೂ ಸರ್ಕಾರದತ್ತ ಮುಖಮಾಡುವ ಅಸಹಾಯಕತೆ ಪಾಲಿಕೆಗೆ ಬರುವುದು ಬೇಡ. ವಾರ್ಡ್ ಮಟ್ಟದಲ್ಲಿ ಬಳಸಲು ತಲಾ ₹ 5ಲಕ್ಷ ಒದಗಿಸಿ’ ಎಂದು ಒತ್ತಾಯಿಸಿದರು.

‘ಆರೋಗ್ಯ ಕಾರ್ಯಕ್ರಮಗಳಿಗೆ ಬಜೆಟ್ ಗಾತ್ರದಲ್ಲಿ ಶೇ 1ರಷ್ಟು ಅನುದಾನ ನೀಡಿದ್ದು ಏನೇನೂ ಸಾಲದು. ಆರೋಗ್ಯ ಸೇವೆ ಬಲಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿಯ ಡಾ.ರಾಜು ಒತ್ತಾಯಿಸಿದರು.

ಕಳೆದ ವರ್ಷ ಮಂಜೂರಾದ ಅನೇಕ ವಾರ್ಡ್ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಲು ಬಜೆಟ್ನಲ್ಲಿ ಅನುದಾನ ಹಂಚಿಕೆ ಮಾಡದಿರುವ ಬಗ್ಗೆ ಪದ್ಮನಾಭ ರೆಡ್ಡಿ ಗಮನ ಸೆಳೆದರು. ಇಂತಹ ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡುವುದಾಗಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಭರವಸೆ ನೀಡಿದರು.

ಸಣ್ಣ ಪುಟ್ಟ ಮಾರ್ಪಾಡುಗಳೊಂದಿಗೆ 2020–21ನೇ ಸಾಲಿನ ಬಜೆಟ್ ಅಂಗೀಕರಿಸುವ ಕುರಿತು ಕೌನ್ಸಿಲ್ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಇತರ ನಿರ್ಣಯಗಳು

* ಅವಶ್ಯ ವೆಚ್ಚಗಳಾದ ವೇತನ, ಪಿಂಚಣಿ, ನಿರ್ವಹಣಾ ವೆಚ್ಚಗಳಿಗೆ ಬಜೆಟ್ನ ಒಟ್ಟು ಗಾತ್ರದಲ್ಲಿ ಶೇ 30ರಷ್ಟು ಅನುದಾನವನ್ನು ವೆಚ್ಚ ಮಾಡಲು ಆಯುಕ್ತರಿಗೆ ಅಧಿಕಾರ ನೀಡುವ ಕುರಿತ ಲೇಖಾನುದಾನ ಪ್ರಸ್ತಾವ ಅಂಗೀಕಾರ.

* ಕೆಲವು ಸಂಘ ಸಂಸ್ಥೆಗಳಿಗೆ 2019–20ರಲ್ಲಿ ಮಂಜೂರಾದ ಅನುದಾನ ಬಿಡುಗಡೆಗೆ ಒಪ್ಪಿಗೆ

* 2020–21ನೇ ಸಾಲಿನ ಬಜೆಟ್ನಲ್ಲಿ ವೈದ್ಯಕೀಯ ವೆಚ್ಚ ಭರಿಸುವ ಬಿಲ್ ಪಾವತಿ ಕುರಿತು ಪಾಲಿಕೆ ಸದಸ್ಯರ ವಿವೇಚನೆಗೆ ಒಳಪಟ್ಟ ಅನುದಾನ ಹಾಗೂ ಮೇಯರ್ ವಿವೇಚನೆಯ ಅನುದಾನದಬಳಕೆಗೆ ಷರತ್ತುಬದ್ಧ ಅನುಮೋದನೆ ನಿರೀಕ್ಷಿಸಿ ಬಳಸುವ ಪ್ರಸ್ತಾಪ ಅಂಗೀಕಾರ.

* 2019–20ನೇ ಸಾಲಿನಲ್ಲಿ ಮಂಜೂರಾದ ಕೆಲ ಕಾಮಗಾರಿಗಳಿಗೆ ಜಾಬ್ಕೋಡ್ ಪಡೆಯಲು ಸಾಧ್ಯವಾಗದೆ ಸಮಸ್ಯೆ ಉಂಟಾಗಿದೆ. ಇದನ್ನು ನೀಗಿಸಲು ಐಎಫ್ಎಂಎಸ್ ತಂತ್ರಾಂಶ ಬ್ಲಾಕ್ ಆಗಿರುವುದನ್ನು ತೆರವುಗೊಳಿಸಿ ಜಾಬ್ಕೋಡ್ ನೀಡಲು ಆಯುಕ್ತರಿಗೆ ಅಧಿಕಾರ

ಆಹಾರ ಕಿಟ್ನಲ್ಲಿ ಕಳಪೆ ಸಾಮಗ್ರಿ– ಪ್ರತಿಪಕ್ಷ ಆರೋಪ

‘ಬಡವರಿಗೆ ಸರ್ಕಾರ ವಿತರಿಸುವ ಕಿಟ್ಗಳಲ್ಲಿ ಕಳಪೆ ಆಹಾರ ಸಾಮಗ್ರಿಗಳನ್ನು ಬಳಸಲಾಗುತ್ತಿದೆ. ಕೆಲವೆಡೆ ಕಿಟ್ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆದಿದೆ’ ಎಂದು ಬಿಬಿಎಂಪಿಯ ವಿರೋಧ ಪಕ್ಷಗಳು ಆರೋಪ ಮಾಡಿವೆ.

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಬುಧವಾರ ಆಹಾರದ ಕಿಟ್ ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯ ಎಂ.ಶಿವರಾಜು, ‘ಕಳಪೆ ಅಕ್ಕಿಯನ್ನೇ ಪಾಲಿಷ್ ಮಾಡಿ ಪೂರೈಸಲಾಗುತ್ತಿದೆ. ಬ್ರಾಂಡೆಡ್ ಎಣ್ಣೆ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಇದು ಬ್ರಾಂಡೆಡ್ ಉತ್ಪನ್ನವೇ’ ಎಂದು ಅಡುಗೆ ಎಣ್ಣೆಯ ಪೊಟ್ಟಣವನ್ನು ತೋರಿಸಿ ಪ್ರಶ್ನಿಸಿದರು.

‘ಆಹಾರ ಸಾಮಗ್ರಿಗಳ ತೂಕ ಪರೀಕ್ಷೆ ಮಾಡಲು ಯಾವೊಬ್ಬ ಅಧಿಕಾರಿಯೂ ಇಲ್ಲ. ಕಿಟ್ ತಯಾರಿಸುವವರು ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಪರಸ್ಪರ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ’ ಎಂದು ದೂರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರದ ಪದ್ಮನಾಭ ರೆಡ್ಡಿ ಹಾಗೂ ಬಿ.ಎಸ್. ಸತ್ಯನಾರಾಯಣ, ‘ಸುಳ್ಳು ಆರೋಪ ಮಾಡಬೇಡಿ. ರಾಜಕಾರಣ ಮಾಡುವ ಸಂದರ್ಭ ಇದಲ್ಲ’ ಎಂದು ಟೀಕಿಸಿದರು.

‘ಬೇಕಿದ್ದರೇ ಈಗಲೇ ಕಿಟ್ ತಯಾರಿಸುವ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಪರಿಶೀಲಿಸೋಣ’ ಎಂದು ಸವಾಲು ಹಾಕಿದ ಶಿವರಾಜು, ‘ಇಂತಹ ಬಿಕ್ಕಟ್ಟಿನಲ್ಲೂ ಅವ್ಯವಹಾರ ನಡೆಸಿದರೆ ದೇವರು ಕ್ಷಮಿಸುವುದಿಲ್ಲ’ ಎಂದರು.

ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್, ‘ಜನರ ದಾರಿ ತಪ್ಪಿಸಿ ಆತಂಕಗೊಳ್ಳುವಂತೆ ಮಾಡಬೇಡಿ’ ಎಂದು ಮನವಿ ಮಾಡಿದರು.

‘ಈ ಬಗ್ಗೆ ಪರಿಶೀಲಿಸುತ್ತೇವೆ. ಲೋಪ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ’ ಎಂದು ಮೇಯರ್ ಎಂ.ಗೌತಮ್ ಕುಮಾರ್ ಭರವಸೆ ನೀಡಿದರು.

‘ಮಹಾಲಕ್ಷ್ಮಿ ಕಾರ್ಯಕ್ರಮ ನಿಲ್ಲಿಸುವುದಿಲ್ಲ’

ಪಾಲಿಕೆ ಆಸ್ಪತ್ರೆಗಳಲ್ಲಿ ಹುಟ್ಟುವ ಹೆಣ್ಣುಮಗುವಿನ ಹೆಸರಿನಲ್ಲಿ ₹ 1 ಲಕ್ಷ ಬಾಂಡ್ ವಿತರಿಸುವ ಮಹಾಲಕ್ಷ್ಮೀ ಕಾರ್ಯಕ್ರಮಕ್ಕೆ ಬಜೆಟ್ನಲ್ಲಿ ಅನುದಾನ ಕಾಯ್ದಿರಿಸದ ಬಗ್ಗೆ ಕಾಂಗ್ರೆಸ್ ಸದಸ್ಯೆ ಗಂಗಾಂಬಿಕೆ ಆಕ್ಷೇಪ ವ್ಯಕ್ತಪಡಿಸಿದರು.

‘ಈ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ’ ಎಂದು ಮೇಯರ್ ಸ್ಪಷ್ಟಪಡಿಸಿದರು.

‘ಬಿಜೆಪಿಯವರಿಗೆ ಮಾತ್ರ ಕಿಟ್’

‘ಆಹಾರ ಸಾಮಗ್ರಿಗಳ ಕಿಟ್ ಪೂರೈಸುವಾಗಲೂ ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡ್ಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಾವು ಬೇಡಿಕೆ ಸಲ್ಲಿಸಿದರೂ ಕಿಟ್ ಕಳುಹಿಸಿಲ್ಲ. ಮಹದೇವಪುರ ವಲಯವೊಂದಕ್ಕೆ 22 ಸಾವಿರ ಕಿಟ್ ಪೂರೈಸಲಾಗಿದೆ. ಬೇರೆ ವಲಯಗಳಲ್ಲಿ ಬಡವರಿಲ್ಲವೇ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪ್ರಶ್ನಿಸಿದರು.

ಇದಕ್ಕೆ ಕಾಂಗ್ರೆಸ್ನ ಮಂಜುನಾಥ ರೆಡ್ಡಿ, ಆರ್.ಎಸ್.ಸತ್ಯನಾರಾಯಣ, ಜೆಡಿಎಸ್ನ ನೇತ್ರಾ ನಾರಾಯಣ್, ಭದ್ರೇಗೌಡ ದನಿಗೂಡಿಸಿದರು.

‘ಕಾರ್ಮಿಕರು ಎಲ್ಲೆಲ್ಲಿದ್ದಾರೆ ಎಂಬುದನ್ನು ನೋಡಿಕೊಂಡು ಅಧಿಕಾರಿಗಳು ಕಿಟ್ ಪೂರೈಸಿದ್ದಾರೆ’ ಎಂದು ಮೇಯರ್ ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.